ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸುಲಭ ತುತ್ತಾದ ಪಾಕ್‌

ಏಕ್ತಾ ಬಿಷ್ಠ್‌ ಮಿಂಚು; ಸಂಘಟಿತ ಹೋರಾಟಕ್ಕೆ ಒಲಿದ ಗೆಲುವು
Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಡರ್ಬಿ, ಇಂಗ್ಲೆಂಡ್ (ಪಿಟಿಐ):  ಏಕ್ತಾ ಬಿಷ್ಠ್ (18ಕ್ಕೆ5) ಅವರ ಸ್ಪಿನ್ ದಾಳಿಗೆ ನಲುಗಿದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಭಾರತಕ್ಕೆ ಸುಲಭ ತುತ್ತಾಗಿದೆ.

ಭಾರತಕ್ಕೆ ಇದು ಮೂರನೇ ಗೆಲುವು ಆಗಿದೆ. ಈ ಜಯದಿಂದ ಭಾರತ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಆಡಿದ ಮೂರು ಪಂದ್ಯ ಗೆದ್ದು ಆರು ಪಾಯಿಂಟ್ಸ್‌ಗಳನ್ನು ಭಾರತ ಪಡೆದುಕೊಂಡಿದೆ. ಮಿಥಾಲಿ ರಾಜ್‌ ಪಡೆ ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಸಾಧಾರಣ ಮೊತ್ತ ಕಲೆಹಾಕಿತ್ತು. 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ದಾಖಲಿಸಿತ್ತು.

ಇಲ್ಲಿಯವರೆಗೂ ವಿಶ್ವಕಪ್‌ನಲ್ಲಿ 134ಕ್ಕಿಂತ ಹೆಚ್ಚು ರನ್ ಗುರಿಯನ್ನು ಮುಟ್ಟದ ಪಾಕ್ ಪಡೆ ಇಲ್ಲಿಯೂ ಭಾರತದ ಎದುರು ತನ್ನ ಅಸಾಮರ್ಥ್ಯ ಬ್ಯಾಟಿಂಗ್ ಸಾಮರ್ಥ್ಯವನ್ನು ಮುಂದುವರಿಸಿತು. ಟೂರ್ನಿಯ ಹಿಂದಿನ ಪಂದ್ಯಗಳಲ್ಲಿಯೂ ಪಾಕ್ ತಂಡದ ಬ್ಯಾಟಿಂಗ್ ಶಕ್ತಿ ಅಷ್ಟಕಷ್ಟೇ. ಭಾರತ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ವುಮನ್‌ಗಳು ಏಕ್ತಾ ಬಿಷ್ಠ್‌ ಅವರ ಸ್ಪಿನ್ ದಾಳಿಗೆ ತರಗೆಲೆಗಳಂತೆ ಉದುರಿದರು.

ಆಯೆಷಾ ಜಾಫರ್‌ ಇನ್ನೇನು ಒಂದು ರನ್ ಗಳಿಸಿ ಖಾತೆ ತೆರೆದಿದ್ದರು. ಏಕ್ತಾ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆರು ರನ್ ಗಳಿಸಿದ್ದ ಜವೇರಿ ಖಾನ್ ಜೂಲನ್ ಗೋಸ್ವಾಮಿ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದರು. ಮೊದಲ ನಾಲ್ಕು ಓವರ್‌ಗಳಲ್ಲಿಯೇ ಮೂರು ವಿಕೆಟ್ ಪಡೆದ ಏಕ್ತಾ ಮಿಂಚಿದರು. ಆಯೆಷಾ ಸೇರಿದಂತೆ ಸಿದ್ರಾ ನವಾಜ್ (0), ಇರಮ್ ಜಾವೇದ್ (0) ಕೂಡ ಅವರ ಬೌಲಿಂಗ್ ದಾಳಿಗೆ ಪೆವಿಲಿಯನ್ ಸೇರಿಕೊಂಡರು.
ಏಕ್ತಾ ಬಿಷ್ಠ್ ಬೌಲಿಂಗ್ ಮೂವರು ಆಟಗಾರ್ತಿಯರು ಸೊನ್ನೆ ಸುತ್ತಿರುವುದು ವಿಶೇಷ. ಕೆಳ ಕ್ರಮಾಂಕದ ಆಟಗಾರ್ತಿ ದಿಯಾನ ಬೇಗ್‌ (0) ಕೂಡ ಖಾತೆ ತೆರೆಯಲಿಲ್ಲ.

ಪಾಕ್ ತಂಡದ ನಹಿದಾ ಖಾನ್ (23) ಹಾಗೂ ಸನಾ ಮಿರ್ (29) ಮಾತ್ರ ಎರಡಂಕಿಯ ಗಡಿ ದಾಟುವಲ್ಲಿ ಯಶಸ್ವಿಯಾದರು. ಮಧ್ಯಮಕ್ರಮಾಂಕದ ಬ್ಯಾಟ್ಸ್‌ವು ಮನ್‌ಗಳು ಕಳಪೆಯಾಗಿ ಆಡಿದರು. ಇದಕ್ಕೆ ತಕ್ಕಂತೆ ಏಕ್ತಾ ಅವರೊಂದಿಗೆ ಮಾನಸಿ ಜೋಷಿ (9ಕ್ಕೆ2) ಹಾಗೂ ಹರ್ಮನ್‌ಪ್ರೀತ್ ಕೌರ್ (6ಕ್ಕೆ1), ಜೂಲನ್ ಗೋಸ್ವಾಮಿ (12ಕ್ಕೆ1) ಪರಿಣಾಮಕಾರಿಯಾಗಿ ಬೌಲಿಂಗ್ ದಾಳಿ ನಡೆಸಿದರು.

ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಉಳಿದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂದಾನ ಇಲ್ಲಿ ಕೇವಲ ಎರಡು ರನ್‌ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಉಂಟುಮಾಡಿದರು. ಪೂನಮ್ ರಾವುತ್‌ (47) ತಾಳ್ಮೆಯ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ನಶ್ರಾ ಸಂಧು ಅವರ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದರು. ನಾಯಕಿ ಮಿಥಾಲಿ ರಾಜ್ (8) ಭಾರತ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ಬಳಿಕ ಸುಷ್ಮಾ ವರ್ಮಾ (33) ಹಾಗೂ ಜೂಲನ್ ಗೋಸ್ಮಾಮಿ (14) ಗೌರವದ ಮೊತ್ತ ಕಲೆಹಾಕಲು ಅಲ್ಪ ಕಾಣಿಕೆ ನೀಡಿದರು.

ಸ್ಕೋರ್‌ಕಾರ್ಡ್‌
ಭಾರತ   9ಕ್ಕೆ 169  (50  ಓವರ್‌ಗಳಲ್ಲಿ)
ಪೂನಮ್ ರಾವುತ್‌ ಸಿ ಮತ್ತು ಬಿ ನಶ್ರಾ ಸಂಧು  47
ಸ್ಮೃತಿ ಮಂದಾನ ಎಲ್‌ಬಿಡಬ್ಲ್ಯು ಬಿ ದಿಯಾನ ಬೇಗ್‌  02
ದೀಪ್ತಿ ಶರ್ಮಾ ಸಿ ಸಿದ್ರಾ ನವಾಜ್‌ ಬಿ ನಶ್ರಾ ಸಂಧು  28
ಮಿಥಾಲಿ ರಾಜ್‌ ಎಲ್‌ಬಿಡಬ್ಲ್ಯು ಬಿ ನಶ್ರಾ ಸಂಧು  08
ಹರ್ಮನ್‌ಪ್ರೀತ್ ಕೌರ್‌ ಸಿ ಸನಾ ಮೀರ್‌ ಬಿ ಸಾದಿಯಾ ಯೂಸುಫ್‌  10
ಸುಷ್ಮಾ ವರ್ಮಾ ಸಿ ದಿಯಾನ ಬೇಗ್‌ ಬಿ ಅಸ್ಮವಿಯಾ ಇಕ್ಬಾಲ್‌  33
ಜೂಲನ್ ಗೋಸ್ವಾಮಿ ಬಿ ನಶ್ರಾ ಸಂಧು  14
ಮಾನಸಿ ಜೋಷಿ ಔಟಾಗದೆ  04
ಏಕ್ತಾ ಬಿಷ್ಠ್‌ ರನೌಟ್ (ಸಿದ್ರಾ ನವಾಜ್‌/ನಶ್ರಾ ಸಂಧು) 01
ಪೂನಮ್ ಯಾದವ್ ಔಟಾಗದೆ  06
ಇತರೆ: (ಬೈ 4, ಲೆಗ್‌ಬೈ 1, ವೈಡ್‌ 5)  10
ವಿಕೆಟ್‌ ಪತನ:  1–7 (ಮಂದಾನ; 3.3ಓವರ್‌), 2–74 (ರಾವುತ್‌; 22.2), 3–93 (ಮಿಥಾಲಿ; 26.1), 4–94 (ಶರ್ಮಾ 26.3), 5–107 (ಕೌರ್‌; 34.3), 6–111 (ಮೆಷ್ರಮ್‌; 36.6), 7–145 (ಗೋಸ್ವಾಮಿ; 46.6), 8–159 (ವರ್ಮಾ; 47.6), 9–161 (ಬಿಷ್ಠ್‌; 48.2).
ಬೌಲಿಂಗ್‌:  ಅಸ್ಮಾವಿಯಾ ಇಕ್ಬಾಲ್‌ 10–0–46–1, ದಿಯಾನ ಬೇಗ್‌ 10–3–28–1, ನಶ್ರಾ ಸಂಧು 10–1–26–4, ಸನಾ ಮಿರ್‌ 10–0–34–0, ಸಾದಿಯಾ ಯೂಸುಫ್‌ 10–2–30–2.

ಪಾಕಿಸ್ತಾನ 74   (38.1   ಓವರ್‌ಗಳಲ್ಲಿ)
ಆಯೆಷಾ ಜಾಫರ್ ಎಲ್‌ಬಿಡಬ್ಲ್ಯು ಏಕ್ತಾ ಬಿಷ್ಠ್‌  1
ನಹಿದಾ ಖಾನ್ ಸ್ಟಂಪ್ಡ್ ವರ್ಮಾ ಬಿ ಹರ್ಮನ್‌ಪ್ರೀತ್ ಕೌರ್‌  23
ಜವೇರಿಯಾ ಖಾನ್‌ ಎಲ್‌ಬಿಡಬ್ಲ್ಯು ಜೂಲನ್ ಗೋಸ್ವಾಮಿ  6
ಸಿದ್ರಾ ನವಾಜ್ ಎಲ್‌ಬಿಡಬ್ಲ್ಯು ಏಕ್ತಾ ಬಿಷ್ಠ್‌  0
ಇರಾಮ್ ಜಾವೇದ್ ಎಲ್‌ಬಿಡಬ್ಲ್ಯು ಏಕ್ತಾ ಬಿಷ್ಠ್‌  0
ನೈನ್ ಅಬಿದಿ ಬಿ ಶರ್ಮಾ  5
ಅಸ್ಮಾವಿಯಾ ಇಕ್ಬಾಲ್ ಸ್ಟಂಪ್ಡ್ ವರ್ಮಾ ಬಿ ಜೋಷಿ  0
ಸನಾ ಮಿರ್ ಬಿ ಜೋಷಿ  29
ನಶ್ರಾ ಸಂಧು ಸಿ ಜೋಷಿ ಬಿ ಏಕ್ತಾ ಬಿಷ್ಠ್‌  1
ದಿಯಾನ ಬೇಗ್ ಬಿ ಏಕ್ತಾ ಬಿಷ್ಠ್‌   0
ಸಾದಿಯಾ ಯೂಸುಫ್ ಔಟಾಗದೆ  3
ಇತರೆ: (ವೈಡ್‌ 6)  6
ವಿಕೆಟ್‌ ಪತನ:   1–1 (ಆಯೆಷಾ; 1.4), 2–8 (ಜಾವೆರಿಯಾ; 4.3), 3–9 (ಸಿದ್ರಾ; 5.4), 4–14 (ಇರಮ್; 7.1), 5–24 (ನೈನ್‌; 13.1), 6–26 (ಅಸ್ಮಾವಿಯಾ; 14.6), 7–44 (ನಹಿದಾ; 23.3), 8–51 (ನಶ್ರಾ; 28.3), 9–51 (ದಿಯಾನ; 28.4), 10–74 (ಸನಾ; 38.1).
ಬೌಲಿಂಗ್‌: ಜೂಲನ್ ಗೋಸ್ವಾಮಿ 5–0–12–1, ಏಕ್ತಾ ಬಿಷ್ಠ್‌ 10–2–18–5, ದೀಪ್ತಿ ಶರ್ಮಾ 10–2–21–1, ಮಾನಸಿ ಜೋಷಿ 6.1–2–9–2,  ಪೂನಮ್ ಯಾದವ್ 5–1–8–0, ಹರ್ಮನ್‌ಪ್ರೀತ್ ಕೌರ್‌ 2–0–6–1. ಫಲಿತಾಂಶ: ಭಾರತಕ್ಕೆ 95ರನ್‌ಗಳ ಜಯ. ಪಂದ್ಯ ಶ್ರೇಷ್ಠ: ಏಕ್ತಾ ಬಿಷ್ಠ್‌
ಫಲಿತಾಂಶ: ಭಾರತಕ್ಕೆ 95 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT