ಸೋಮವಾರ, ಡಿಸೆಂಬರ್ 16, 2019
17 °C
ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಖುಷಿ, ರಕ್ಷಿತ್‌ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖುಷಿ, ರಕ್ಷಿತ್‌ ಚಾಂಪಿಯನ್‌

ಬೆಂಗಳೂರು: ಅಮೋಘ ಸಾಮರ್ಥ್ಯ ದಿಂದ ಆಡಿದ ವಿ. ಖುಷಿ ಮತ್ತು ಬಿ. ರಕ್ಷಿತ್‌ ಇಲ್ಲಿ ನಡೆಯುತ್ತಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಯಲ್ಲಿ ಭಾನುವಾರ ಕ್ರಮವಾಗಿ ಮಹಿಳೆ ಯರ ಮತ್ತು ಪುರುಷರ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದಾರೆ.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಖುಷಿ 11–13, 11–6, 11–4, 8–11, 11–2, 5–11, 11–5ರಲ್ಲಿ ಕೌಮುದಿ ಪಟ್ನಾಕರ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಖುಷಿ 4–11, 11–6, 9–11, 11–5, 15–13, 7–11, 12–10ರಲ್ಲಿ ಎ. ಸಮ್ಯುಖಾ ಅವರನ್ನು ಮಣಿಸಿ ಫೈನಲ್ ತಲುಪಿದ್ದರು.

ಕೌಮುದಿ 11–4, 12–10, 11–7, 12–10ರಲ್ಲಿ ಅಪೂರ್ವ ಬಕ್ಷಿ ಎದುರು ಗೆದ್ದು ಫೈನಲ್ ಪ್ರವೇಶಿಸಿದ್ದರು. ಪುರುಷರ ವಿಭಾಗದ ಫೈನಲ್‌ನಲ್ಲಿ ರಕ್ಷಿತ್‌ 14–12, 9–11, 11–1, 14–12, 11–7ರಲ್ಲಿ ಶ್ರೇಯಸ್ ಕುಲಕರ್ಣಿ ಎದುರು ಜಯಭೇರಿ ದಾಖಲಿಸಿದರು. ಸೆಮಿಫೈನಲ್‌ನಲ್ಲಿ ರಕ್ಷಿತ್‌ 10–12, 11–8, 11–9, 13–11, 3–11, 11–7ರಲ್ಲಿ ದಿನಕರ್ ನಾಯ್ಡು ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶಿಸಿದ್ದರು.

ಶ್ರೇಯಸ್ 6–11, 11–6, 11–4, 11–5, 11–3ರಲ್ಲಿ ಅನಿರ್ಬನ್ ಮೇಲೆ ಗೆಲುವು ದಾಖಲಿಸಿದ್ದರು.

ಆಕಾಶ್‌, ಅನರ್ಘ್ಯಗೆ ಪ್ರಶಸ್ತಿ: ಸಬ್ ಜೂನಿಯರ್‌ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಕ್ರಮವಾಗಿ ಕೆ.ಜೆ. ಆಕಾಶ್ ಮತ್ತು ಎಮ್.ಅನರ್ಘ್ಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.  ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅನರ್ಘ್ಯ 11–9, 9–11, 11–7, 11–7ರಲ್ಲಿ ಜಿ. ಯಶಸ್ವಿನಿ ಮೇಲೆ ಗೆದ್ದರು. ಸೆಮಿಫೈನಲ್‌ನಲ್ಲಿ ಯಶಸ್ವಿನಿ ಅವರು ರೈನಾ ನಾರಾ ಮೇಲೂ, ಅನರ್ಘ್ಯಾ ಅವರು ಡಿ. ಕಲ್ಯಾಣಿ ವಿರುದ್ಧವೂ ಗೆದ್ದು ಫೈನಲ್ ಪ್ರವೇಶಿಸಿದ್ದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಆಕಾಶ್ 11–7, 9–11, 11–9, 12–10ರಲ್ಲಿ ನೀಲ್ ಗೊಲ್ಲರಕೇರಿ ವಿರುದ್ಧ ಜಯಗಳಿಸಿದರು. ಸೆಮಿಫೈನಲ್‌ನಲ್ಲಿ ಆಕಾಶ್‌ ಅವರು ಸುಜನ್ ಭಾರಧ್ವಾಜ್ ಅವರ ಮೇಲೂ, ನೀಲ್, ಶ್ರೀಕಾಂತ್ ಕಶ್ಯಪ್ ಅವರ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು.

ದೇಷ್ನಾ, ರೋಹಿತ್‌ಗೆ ಪ್ರಶಸ್ತಿ: ಕೆಡೆಟ್ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಕ್ರಮವಾಗಿ ಎಮ್‌. ದೇಷ್ನಾ ಹಾಗೂ ರೋಹಿತ್ ಶಂಕರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬಾಲಕರ ವಿಭಾಗದ ಫೈನಲ್‌ನಲ್ಲಿ ರೋಹಿತ್‌ 11–6, 11–8, 6–11, 8–11, 11–4ರಲ್ಲಿ ಹೃಷಿಕೇಶ್‌ ಶೆತ್ತೂರ್ ವಿರುದ್ಧ ಗೆದ್ದರು. ಸೆಮಿಫೈನಲ್‌ನಲ್ಲಿ ರೋಹಿತ್ , ವರುಣ್ ಬಿ. ಕಶ್ಯಪ್ ಮೇಲೂ, ಹೃಷಿ ಕೇಶ್, ಸಿದ್ಧಾಂತ್ ವಾಸನ್ ವಿರುದ್ಧವೂ ಗೆಲುವು ಪಡೆದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ  ದೇಷ್ನಾ 7–11,  11–8, 11–9, 1–6ರಲ್ಲಿ ಸಹನಾ ಎಮ್‌. ಮೂರ್ತಿ ವಿರುದ್ಧ ಜಯ ದಾಖಲಿಸಿದರು.ಸೆಮಿಫೈನಲ್‌ನಲ್ಲಿ ದೇಷ್ನಾ, ತೃಪ್ತಿ ಪುರೋಹಿತ್ ವಿರುದ್ಧ ಗೆದ್ದರೆ, ಸಹನಾ ಅವರು ಶ್ವೇತಾ ಮೇಲೆ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ನಾನ್ ಮೆಡಲಿಸ್ಟ್ ವಿಭಾಗದಲ್ಲಿ ಎಸ್‌. ವಾಮದೇವ 11–9, 6–11, 12–10, 11–6ರಲ್ಲಿ ವಿ. ಮಣಿಕಂದನ್ ವಿರುದ್ಧ ಗೆಲುವು ಪಡೆದುಕೊಂಡರು.

ಪ್ರತಿಕ್ರಿಯಿಸಿ (+)