ಶನಿವಾರ, ಡಿಸೆಂಬರ್ 7, 2019
24 °C

ವಿಜೇಂದರ್ ಪಂದ್ಯದ ಟಿಕೆಟ್‌ಗಳ ಮಾರಾಟ ಇಂದಿನಿಂದ

Published:
Updated:
ವಿಜೇಂದರ್ ಪಂದ್ಯದ ಟಿಕೆಟ್‌ಗಳ ಮಾರಾಟ ಇಂದಿನಿಂದ

ಮುಂಬೈ : ತೀವ್ರ ಕುತೂಹಲ ಹುಟ್ಟಿಸಿರುವ ಭಾರತದ ವಿಜೇಂದರ್ ಸಿಂಗ್‌ ಹಾಗೂ ಚೀನಾದ ಜುಲ್ಫಿಕರ್ ಮೈಮಿತಾಲಿ ಅವರ ವೃತ್ತಿಪರ ಬಾಕ್ಸಿಂಗ್‌ ಪಂದ್ಯದ ಆನ್‌ಲೈನ್ ಟಿಕೆಟ್‌ಗಳ ಮಾರಾಟ ಭಾನುವಾರದಿಂದ ಆರಂಭವಾಗಿದೆ.

ಡಬ್ಲ್ಯುಬಿಒ ಏಷ್ಯಾ ಫೆಸಿಫಿಕ್ ಸೂಪರ್ ಮಿಡ್ಲವೇಟ್ ಚಾಂಪಿಯನ್ ವಿಜೇಂದರ್ ಸಿಂಗ್‌ ಡಬ್ಲ್ಯುಬಿಒ ಓರಿ ಯಂಟಲ್ ಸೂಪರ್ ಮಿಡ್ಲ್‌ವೇಟ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಜುಲ್ಫಿಕರ್ ವಿರುದ್ಧ ಸೆಣೆಸಲಿದ್ದಾರೆ.

www.bookmyshow.comನಲ್ಲಿ ಟಿಕೆಟ್‌ಗಳು ಮಾರಾಟಕ್ಕಿವೆ. 1200ರಿಂದ 12,000ದವರೆಗೆ ಬೇರೆ ಬೇರೆ ವಿಭಾಗದಲ್ಲಿ ಟಿಕೆಟ್‌ಗಳು ಸಿಗುತ್ತವೆ. ‘ಮುಂಬೈನಲ್ಲಿ ಪಂದ್ಯ ನಡೆಯುತ್ತಿ ರುವುದಕ್ಕೆ ಅತೀವ ಸಂತಸವಾಗಿದೆ. ಇಲ್ಲಿನ ಅಭಿಮಾನಿಗಳ ಎದುರು ಆಡಲು ಖುಷಿಯಾಗುತ್ತದೆ. ಹೆಚ್ಚು ಜನರು ಬರುವ ವಿಶ್ವಾಸ ಇದೆ’ ಎಂದು ವಿಜೇಂದರ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)