ಬುಧವಾರ, ಡಿಸೆಂಬರ್ 11, 2019
25 °C

ನಾಳೆ ಬಸ್‌ ದಿನ, ಜನಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆ ಬಸ್‌ ದಿನ, ಜನಸ್ಪಂದನ

ಬೆಂಗಳೂರು: ಸಂಚಾರ ದಟ್ಟಣೆ ನಿವಾರಿಸಲು ಹಾಗೂ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಜುಲೈ 4ರಂದು 90ನೇ ಬಸ್ ದಿನ ಆಚರಿಸುತ್ತಿದೆ.

ಬಸ್‌ ದಿನದ ಪ್ರಯುಕ್ತ ಪ್ರಯಾಣಿಕರ ಅಗತ್ಯ ಮತ್ತು ಬೇಡಿಕೆಗಳನ್ನು ತಿಳಿಯಲು, ಅಹವಾಲುಗಳನ್ನು ಸ್ವೀಕರಿಸಲು ಬನಶಂಕರಿ ಬಸ್‌ ನಿಲ್ದಾಣದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ.

ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ. ಸಾರಿಗೆ ಸೇವೆಗಳ ಕುರಿತ ಕುಂದು–ಕೊರತೆಗಳನ್ನು ಅವರ ಗಮನಕ್ಕೆ ತರಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)