ಶುಕ್ರವಾರ, ಡಿಸೆಂಬರ್ 13, 2019
17 °C
ತೆರೆಯ ಹಿಂದೆ ಅಸಂಖ್ಯ ಅನಾಮಧೇಯ ವ್ಯಕ್ತಿಗಳು

ಜಿಎಸ್‌ಟಿ ಯಶಸ್ಸಿನ ಹಿಂದೆ ಅಧಿಕಾರಿಗಳ ಪರಿಶ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ ಯಶಸ್ಸಿನ ಹಿಂದೆ ಅಧಿಕಾರಿಗಳ ಪರಿಶ್ರಮ

ನವದೆಹಲಿ: ಪ್ರತಿಯೊಂದು ಯಶಸ್ಸಿನ ಹಿಂದೆ ಹಲವು ವ್ಯಕ್ತಿಗಳ ಪರಿಶ್ರಮ ಇರುತ್ತದೆ. ಏಕರೂಪದ ತೆರಿಗೆ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ)  ರೂಪ ಕೊಡುವ ಮತ್ತು ಯಶಸ್ವಿ ಜಾರಿಗೆ ತೆರೆಯ ಹಿಂದಿದ್ದುಕೊಂಡೇ ಹಗಲಿರುಳು ಶ್ರಮಿಸಿರುವರು ಬಹಳಷ್ಟು ಮಂದಿ ಇದ್ದಾರೆ.ಜಿಎಸ್‌ಟಿ ಜಾರಿಗೆ ಒಂದು ದಶಕದಿಂದ ಹಲವು ಹಂತಗಳಲ್ಲಿ ಕೆಲಸ ನಡೆದಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಐದು ಪೂರಕ ಮಸೂದೆಗಳನ್ನು ಮಂಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಜಿಎಸ್‌ಟಿ ಜಾರಿಗೆ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡಿದ್ದಾರೆ.

ಜಿಎಸ್‌ಟಿ ಕರಡು: ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆಯ ಕರಡು ಮತ್ತು ರಾಜ್ಯಗಳಿಗೆ ಪರಿಹಾರಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ಹಿಂದೆ ರೆವಿನ್ಯೂ ಇಲಾಖೆಯ ಜಂಟಿ ಕಾರ್ಯದರ್ಶಿ ಉದಯ್‌ ಕುಮಾವತ್‌ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ತರಬೇತಿ: ಜಿಎಸ್‌ಟಿ ತರಬೇತಿ ಕೇಂದ್ರದ ಪ್ರಧಾನ ನಿರ್ದೇಶಕ ಪಿ.ಕೆ.ದಾಸ್‌ ಅವರು ಜಿಎಸ್‌ಟಿ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯದ 55 ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿಗೆ ಅವರು ತರಬೇತಿ ನೀಡಿದ್ದಾರೆ.ಮುಂಚೂಣಿಯಲ್ಲಿದ್ದವರು:

*ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ

*ಸಿಬಿಇಸಿ ಅಧ್ಯಕ್ಷೆ ವನಜಾ ಸರ್ನಾ

*ಜಿಎಸ್‌ಟಿ ಆಯುಕ್ತ ಉಪೇಂದ್ರ ಗುಪ್ತಾಸಲಹೆ ನೀಡಿದವರು:

*ರೆವಿನ್ಯೂ ಇಲಾಖೆ ಸಲಹೆಗಾರ ಪಿ.ಕೆ. ಮೊಹಂತಿ

*ಜಂಟಿ ಕಾರ್ಯದರ್ಶಿ ಅಲೋಕ್‌ ಶುಕ್ಲಾ

*ಸಿಬಿಇಸಿ ಮುಖ್ಯ ಆಯುಕ್ತ ಪಿ.ಕೆ. ಜೈನ್‌

*ಸಿಬಿಸಿಸಿ ಆಯುಕ್ತ ಮನಿಶ್‌ ಸಿನ್ಹಾರಾಜ್ಯಗಳ ಅಧಿಕಾರಿಗಳು:

*ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಹೃತ್ವಿಕ್‌ ಪಾಂಡೆ

*ಗುಜರಾತ್‌ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಪಿ.ಡಿ. ವಘೇಲಾ

*ಮಹಾರಾಷ್ಟ್ರ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರಾಜೀವ್ ಜಲೋಟಾ

*ಬಿಹಾರ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅರುಣ್‌ ಮಿಶ್ರಾ

*ಪಶ್ಚಿಮ ಬಂಗಾಳದ ಹೆಚ್ಚುವರಿ ಆಯುಕ್ತ ಅನ್ವರ್‌ ಖಲೀದ್

ಪ್ರತಿಕ್ರಿಯಿಸಿ (+)