ಬುಧವಾರ, ಡಿಸೆಂಬರ್ 11, 2019
25 °C

ಸಂಚಾರಿ ಪೊಲೀಸರಿಗೆ ಮುಖಗವಸು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರಿ ಪೊಲೀಸರಿಗೆ ಮುಖಗವಸು ವಿತರಣೆ

ಬೆಂಗಳೂರು: ಕರಾವಳಿ ಜನಕೂಟ ಸಂಘವು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆ.ಆರ್‌.ಪುರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮುಖಗವಸುಗಳನ್ನು ವಿತರಣೆ ಮಾಡಲಾಯಿತು.

ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌  ಸಂಜೀವ್‌ ರಾಯಪ್ಪ ಮಾತನಾಡಿ, ‘ಜನಸಾಮಾನ್ಯರು, ಸಂಘ–ಸಂಸ್ಥೆಗಳು ಪೊಲೀಸರ ಕೆಲಸಕ್ಕೆ ಸಹಕಾರ ನೀಡಬೇಕು. ಅವರನ್ನು ಪ್ರೋತ್ಸಾಹಿಸಿದರೆ   ಮತ್ತಷ್ಟು ಚೆನ್ನಾಗಿ ಕೆಲಸ ಮಾಡುತ್ತಾರೆ’ ಎಂದರು.

ಕರಾವಳಿ ಜನಕೂಟದ ಅಧ್ಯಕ್ಷ ಜಯಸಾಲಿಯಾನ ಮಾತನಾಡಿ, ‘ನಿತ್ಯ ಕೆ.ಆರ್‌.ಪುರ ಮಾರ್ಗವಾಗಿ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿದ್ದರೆ ಅದಕ್ಕೆ ಪೊಲೀಸರ ಶ್ರಮವೇ ಕಾರಣ. ಮಳೆ, ಬಿಸಿಲು, ದೂಳಿನಿಂದ ಪೊಲೀಸರ ಜೀವಕ್ಕೆ ಆಪತ್ತು ಬರುತ್ತಿದೆ. ಹೀಗಾಗಿ ಸಂಚಾರ ಪೊಲೀಸರಿಗೆ ಮುಖಗವಸುಗಳನ್ನು ವಿತರಿಸುತ್ತಿದ್ದೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)