ಶನಿವಾರ, ಡಿಸೆಂಬರ್ 7, 2019
24 °C

ಏರ್‌ ಇಂಡಿಯಾ ವಿಮಾನದಲ್ಲಿ ಕೈಕೊಟ್ಟ ಹವಾ ನಿಯಂತ್ರಣ ವ್ಯವಸ್ಥೆ, ಉಸಿರುಗಟ್ಟಿಸಿದ ಪ್ರಯಾಣ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾ ವಿಮಾನದಲ್ಲಿ ಕೈಕೊಟ್ಟ ಹವಾ ನಿಯಂತ್ರಣ ವ್ಯವಸ್ಥೆ, ಉಸಿರುಗಟ್ಟಿಸಿದ ಪ್ರಯಾಣ

ನವದೆಹಲಿ: ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಹವಾನಿಯಂತ್ರಣ ವ್ಯವಸ್ಥೆಯ ದೋಷದಿಂದಾಗಿ ಪ್ರಯಾಣಿಕರು ಉಸಿರುಗಟ್ಟಿ ತೊಂದರೆ ಅನುಭವಿಸಿದ್ದಾರೆ.

ಪಶ್ಚಿಮ ಬಂಗಾಳದ ಬಗ್ದೋಗ್ರಾ ವಿಮಾನ ನಿಲ್ದಾಣದಿಂದ 168 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ಎಐ–880 ವಿಮಾನದಲ್ಲಿ ಹವಾ ನಿಯಂತ್ರಣ(ಎಸಿ) ವ್ಯವಸ್ಥೆ ಕಾರ್ಯನಿರ್ವಹಿಸಿಲ್ಲ. ಉಸಿರುಗಟ್ಟಿ ತೊಂದರೆ ಅನುಭವಿಸಿರುವ ಪ್ರಯಾಣಿಕರು ಪ್ರತಿಭಟಿಸಿ ದೂರು ನೀಡಿದ್ದಾರೆ.

ನಿಗದಿತ ಪ್ರಯಾಣದ ಅವಧಿಗಿಂತಲೂ ಮುಂಚಿತವಾಗಿಯೇ ಏರ್‌ ಇಂಡಿಯಾ ವಿಮಾನ ದೆಹಲಿ ವಿಮಾನ ನಿಲ್ದಾಣ ತಲುಪಿದೆ. ಆದರೆ, ಗಾಳಿಯ ಅಭಾವದಿಂದ ಪ್ರಯಾಣಿಕರು ಸೂಚನಾ ಕಾರ್ಡ್‌ಗಳನ್ನು ಬಳಸಿ ಗಾಳಿ ಬೀಸಿಕೊಂಡಿರುವ ದೃಶ್ಯಗಳನ್ನು ಎಎನ್‌ಐ ಪ್ರಕಟಿಸಿದೆ.

ಅವ್ಯವಸ್ಥೆ ತಪ್ಪಿಸಲು ಶೀಘ್ರವೇ ಏರ್‌ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಿಸುವಂತೆ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರತಿಕ್ರಿಯಿಸಿ (+)