ಶನಿವಾರ, ಡಿಸೆಂಬರ್ 14, 2019
25 °C

‘ಜಿ.ಎಸ್.ಟಿ. ಕಾಯ್ದೆಯಡಿ ವ್ಯಾಪಾರ ಸುಲಭ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಿ.ಎಸ್.ಟಿ. ಕಾಯ್ದೆಯಡಿ ವ್ಯಾಪಾರ ಸುಲಭ’

ನಿಪ್ಪಾಣಿ: ‘ವ್ಯಾಟ್ ಕಾಯ್ದೆಗೆ ಹೋಲಿಸಿ ದರೆ ಜಿ.ಎಸ್.ಟಿ. ಕಾಯ್ದೆಯಡಿ ವ್ಯಾಪಾರ–ವಹಿವಾಟು ಸರಳ ಮತ್ತು ಸುಲಭ ಆಗುತ್ತದೆ. ಅಂತರರಾಜ್ಯ ವ್ಯಾಪಾರದ ಮೇಲಿದ್ದ ಬಹಳಷ್ಟು ನಿರ್ಬಂಧಗಳು ರದ್ದಾಗಿರುವುದರಿಂದ ಮತ್ತು ತನಿಖಾ ಠಾಣೆಗಳು ರದ್ದಾಗಿರುವುದರಿಂದ ಯಾವುದೇ ನಿರ್ಬಂಧಗಳಿಲ್ಲದೆ ಮುಕ್ತ ವಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸ್ಥಳೀಯ ಸಹಾಯಕ ಆಯುಕ್ತ ಹಜರತಅಲಿ ದೇಗಿನಾಳ ಶನಿವಾರ ಹೇಳಿದರು.

ಸ್ಥಳೀಯ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸ್ಥಳೀಯ ಕಚೇರಿಯಿಂದ ಸರಕು ಮತ್ತು ಸೇವಾ ತೆರಿಗೆ ಅಧಿ‌ನಿಯಮ 2017ರ ಪ್ರಾರಂಭೋತ್ಸವವನ್ನು ಆಚರಿಸಿ ಸರಕು ಮತ್ತು ಸೇವಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ನೋಂದಣಿ ಮತ್ತು ವಿವರ ಪಟ್ಟಿಯ ಬಗ್ಗೆ ವರ್ತಕರಿಗೆ ಸವಿಸ್ತಾರವಾಗಿ ಮಾಹಿತಿ ಅವರು ನೀಡಿದರು.

ಚಿಕ್ಕೋಡಿ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಹುಕ್ಕೇರಿ ಪ್ರಾರಂಭೋ ತ್ಸವದ ಫಲಕ ಉದ್ಘಾಟಿಸಿ ‘ಜಿ.ಎಸ್‌.ಟಿ. ಕಾಯ್ದೆ ಇಂದು ಜಾರಿಗೆ ಬಂದಿದ್ದು ಇದರ ಸಾಧಕ–ಬಾಧಕಗಳು ತಕ್ಷಣ ತಿಳಿದು ಬರುವುದಿಲ್ಲ. ಆದರೆ ಸದುದ್ದೇಶದಿಂದ ಈ ಕಾಯ್ದೆ ಜಾರಿಗೆ ಬರುತ್ತಿರುವುದ ರಿಂದ ಎಲ್ಲ ವರ್ತಕರು ಸಹಕಾರ ನೀಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಮಲ್ಲೇಶಪ್ಪ ಹುನಕುಂಟಿ ಮಾತನಾಡಿ ‘ರಾಜಿ ತೆರಿಗೆ, ತೆರಿಗೆ ಪಾವತಿ ಹಾಗೂ ಪರಿವರ್ತನಾ ಕಾಲದ ಉಪ ಬಂಧಗಳ ಬಗ್ಗೆ ಮಾಹಿತಿ ನೀಡಿ ಸರಕು ಮತ್ತು ಸೇವಾ ತೆರಿಗೆ  ಗ್ರಾಹಕರ ಮತ್ತು ವರ್ತಕರ ಸ್ನೇಹಿ ತೆರಿಗೆ ಕಾಯ್ದೆ ಆಗಿದೆ ಎಂದು ತಿಳಿಸಿದರು.

ನಿಪ್ಪಾಣಿ ಹಾಗೂ ಚಿಕ್ಕೋಡಿ ವರ್ತಕರು, ಲೆಕ್ಕಿಗರು, ಲೆಕ್ಕ ಪರಿಶೋಧ ಕರು, ತೆರಿಗೆ ಸಲಹೆಗಾರರು, ವಾಣಿಜ್ಯ ತೆರಿಗೆ ಇಲಾಖೆಯ ಸಿಬ್ಬಂದಿ ರವಿಂದ್ರ, ಕುನ್ನೆ, ಕೆ.ಡಿ. ಕೋಳಿ, ಸ್ಮಿತಾ ದಾದು ಗೋಳ, ಜಿ.ವಿ. ಯಾದವ, ಆರ್‌.ಡಿ. ಮೇಘನ್ನವರ, ಮೆಹಬೂಬ, ಅವಿನಾಶ ಮೊಗಲೆ, ವಿಜಯಕುಮಾರ ದೇವರುಷಿ, ಮೊಹಮ್ಮದ ವಾಳಕಿ, ಅಜಿತ ಪುಂಡೆ iದ್ದರು. ಸುರೇಶ ಕಾನಪೇಟ ಸ್ವಾಗತಿಸಿ ದರು. ಸದಾಶಿವ ಕಾಂಬಳೆ ವಂದಿಸಿದರು.

ಪ್ರತಿಕ್ರಿಯಿಸಿ (+)