ಶುಕ್ರವಾರ, ಡಿಸೆಂಬರ್ 13, 2019
20 °C

ಕುಡಿಯುವ ನೀರಿಗಾಗಿ ₹ 10 ಕೋಟಿ ವೆಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗಾಗಿ ₹ 10 ಕೋಟಿ ವೆಚ್ಚ

ಜಮಖಂಡಿ: ನಗರದ ಪರಿಮಿತಿಯಿಂದ ರಾಮತೀರ್ಥ ರಾಮೇಶ್ವರದವರೆಗೆ 1.9 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಯನ್ನು ಅಂದಾಜು ₹ 113. 94 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿದರು.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾ ಖೆಯ 2016–17ನೇ ಸಾಲಿನ 5054 ನಬಾರ್ಡ್‌ ಆರ್‌ಐಡಿಎಫ್‌–22 ರ ಅಡಿ ಯಲ್ಲಿ  ಜಮಖಂಡಿ–ರಾಮೇಶ್ವರ ಜಿಲ್ಲಾ ಮುಖ್ಯ ರಸ್ತೆ ನಿರ್ಮಾಣಕ್ಕೆ ವಿದ್ಯಾಗಿರಿ ಕೆಎಚ್‌ಬಿ ಕಾಲೊನಿ ಸಮೀಪ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ನಗರದ ಮಾಸ್ಟರ್‌ ಪ್ಲಾನ್‌ ಅನು ಷ್ಠಾನ ಸುದ್ದಿ ಈ ಹಿಂದೆ ನಾಗರಿಕರಲ್ಲಿ ಭಯ ಹುಟ್ಟಿಸುತ್ತಿತ್ತು. ಆದ್ದರಿಂದ ಅದನ್ನು ಕೈಬಿಟ್ಟು ನಗರವನ್ನು ಚನ್ನಾಗಿ ಮಾಡಬೇಕು ಎಂದು ಹಲವಾರು ಯೋಜನೆ ರೂಪಿಸಲಾಗಿದೆ. ನಗರಕ್ಕೆ ಮಂಜೂರಾಗಿರುವ ₹ 25 ಕೋಟಿ ಅನು ದಾನದಲ್ಲಿ ₹ 10 ಕೋಟಿ ಅನುದಾನವನ್ನು ಕುಡಿಯುವ ನೀರಿಗಾಗಿ ತೆಗೆದಿರಿಸಲಾಗಿದೆ ಎಂದು ಹೇಳಿದರು.

24x7 ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ 11000 ನಳ ಜೋಡಣೆ ನೀಡಲಾಗುವುದು. ಆ ಪೈಕಿ ಈಗಾಗಲೇ 7500 ನಳ ಜೋಡಣೆ ಕಲ ಸಲಾಗಿದೆ. ನಗರದ 6 ಬಡಾವಣೆಗಳಲ್ಲಿ 24x7 ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇನ್ನೆರಡು ಬಡಾವಣೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಕುಡಚಿ ರಸ್ತೆ ಬದಿಯ ತೋಟಗಾರಿಕೆ ಇಲಾಖೆ ಕಚೇರಿಯ ಪಕ್ಕದ ಜಾಗದಲ್ಲಿ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಆ ಕಟ್ಟಡಕ್ಕಾಗಿ ರಾಜಸ್ತಾನದಿಂದ ಕಲ್ಲುಗಳನ್ನು ತರಿಸಿ ದೆಹಲಿಯ ಪಾರ್ಲಿಮೆಂಟ್‌ ಕಟ್ಟಡದ ಮಾದರಿಯಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಬರುವ ಜನವರಿ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅಲ್ಲಿಯೇ ಕೈಗೊಳ್ಳಲಾಗುವುದು.

ನಗರದ ಬಸ್‌ ನಿಲ್ದಾಣವನ್ನು ಸಿಂಗಾಪುರ ಮಾದರಿಯಲ್ಲಿ ನಿರ್ಮಿಸಲಾಗುವುದು. ರಾಜ್ಯದ ಬೇರೆ ಕಡೆಗಳಲ್ಲಿ ಬಸ್‌ ನಿಲ್ದಾಣಕ್ಕಾಗಿ ಕೇವಲ ಒಂದೆರಡು ಕೋಟಿ ರೂಪಾಯಿ ಮಾತ್ರ ಅನುದಾನ ನೀಡಲಾಗಿದೆ. ಆದರೆ, ಜಮಖಂಡಿ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ ₹ 14.5 ಕೋಟಿ ಅನುದಾನ ಮಂಜೂರಾಗಿದೆ ಎಂದು ವಿವರಿಸಿದರು.

ನಗರದ ಕಟ್ಟೆಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ ಬೋಟಿಂಗ್‌, ಈಜಾಡುವ ಸೌಲಭ್ಯ ಕಲ್ಪಿಸಲಾಗುವುದು. ಹವಾ ನಿಯಂತ್ರಿಕ ಟೆಂಟ್‌ಗಳನ್ನು ನಿರ್ಮಿ ಸಲಾಗುವುದು. ಅದನ್ನು ಮಹಾ ಬಳೇಶ್ವರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಮಲೆನಾಡಿನ ಅನುಭವ ದೊರೆಯುವಂತೆ ಮಾಡಲಾಗುವುದು. ಆ ನಂತರ ವಿದೇಶಿ ಪ್ರವಾಸಿಗರನ್ನು ನಗರಕ್ಕೆ ಆಕರ್ಷಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ರಾಜು ಪಿಸಾಳ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಲೋಕೋಪಯೋಗಿ ಇಲಾಖೆಯ ಎಇಇ ಎಸ್‌.ಬಿ. ಚೌಡಣ್ಣವರ, ಹೆಸ್ಕಾಂ ಎಇಇ ಸಂಜಯ ಆಲಬಾಳ, ನಗರಸಭೆ ಎಇಇ ಆರ್‌.ಆರ್‌. ಕುಲಕರ್ಣಿ, ನಗರಸಭೆ ಸದಸ್ಯ ರಾಜು ಮೈಗೂರ, ನಗರಸಭೆ ಸದಸ್ಯ ಸುರೇಶ ಕಡಕೋಳ, ನಗರಸಭೆ ಸದಸ್ಯ ಬಸವರಾಜ ಹರಕಂಗಿ, ಗುತ್ತಿಗೆ ದಾರ ಸಿ.ಕೆ.ಒಂಟಗೋಡಿ  ಇದ್ದರು.

ಅಂಕಿ–ಅಂಶ

₹113,14 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ

₹14 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ

₹25 ಕೋಟಿ ಜಮಖಂಡಿ ಅಭಿವೃದ್ಧಿಗೆ ಯೋಜನೆ

ಪ್ರತಿಕ್ರಿಯಿಸಿ (+)