ಶುಕ್ರವಾರ, ಡಿಸೆಂಬರ್ 6, 2019
18 °C

ಭಾರತದಲ್ಲಿ ಯಾವುದೇ ಸಮಯದಲ್ಲಿ ದಾಳಿ ಮಾಡಬಲ್ಲೆವು ಎಂದ ಸಲಾವುದ್ದೀನ್‌: ಪಾಕ್‌ ಮಾಧ್ಯಮ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಯಾವುದೇ ಸಮಯದಲ್ಲಿ ದಾಳಿ ಮಾಡಬಲ್ಲೆವು ಎಂದ ಸಲಾವುದ್ದೀನ್‌: ಪಾಕ್‌ ಮಾಧ್ಯಮ

ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದಾಗಿ ಹೇಳಿಕೊಂಡಿರುವ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಮುಖಂಡ ಸಲಾವುದ್ದೀನ್, ಭಾರತದಲ್ಲಿ ಯಾವಾಗ ಬೇಕಾದರೂ ದಾಳಿ ನಡೆಸಬಲ್ಲೆವು ಎಂದು ಬಡಾಯಿ ಕೊಚ್ಚಿಕೊಂಡಿದ್ದಾನೆ ಎಂಬುದಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಈಚೆಗಷ್ಟೇ ಘೋಷಿಸಿರುವ ಜಾಗತಿಕ ಉಗ್ರ ಹಾಗೂ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ ನಾಯಕ ಸಯದ್‌ ಸನಾವುಲ್ಲಾ, ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪಾಕಿಸ್ತಾನ ಸುದ್ದಿ ವಾಹಿನಿ ವರದಿ ಮಾಡಿವೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿರುವ ಸಲಾವುದ್ದೀನ್‌, ‘ಭಾರತದಲ್ಲಿ ಯಾವುದೇ ಸಮಯದಲ್ಲಿ ದಾಳಿ ಮಾಡಬಲ್ಲೆವು’ ಎಂದು ಹೇಳಿದ್ದಾನೆ ಎಂದು ಎಎನ್‌ಐ ಮತ್ತೊಂದು ಟ್ವೀಟ್‌ ಮಾಡಿದೆ.

ಕಾಶ್ಮೀರ ಕಣಿವೆಯನ್ನು ಭಾರತೀಯ ಭದ್ರತಾ ಪಡೆಯ ಸ್ಮಶಾನವನ್ನಾಗಿಸುತ್ತೇವೆ ಎಂದು ಸಲಾವುದ್ದೀನ್‌ ಕಳೆದ ವರ್ಷ ಬೆದರಿಕೆ ಹಾಕಿದ್ದ.

ಪ್ರತಿಕ್ರಿಯಿಸಿ (+)