ಶನಿವಾರ, ಡಿಸೆಂಬರ್ 7, 2019
25 °C

15ನೇ ಅಟಾರ್ನಿ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದ ಕೆ.ಕೆ. ವೇಣುಗೋಪಾಲ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

15ನೇ ಅಟಾರ್ನಿ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದ ಕೆ.ಕೆ. ವೇಣುಗೋಪಾಲ್‌

ನವದೆಹಲಿ: ಖ್ಯಾತ ಸಂವಿಧಾನ ತಜ್ಞ ಮತ್ತು ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್‌ ಅವರು ನೂತನ ಅಟಾರ್ನಿ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಸದ್ಯ ಸೇವೆ ಸಲ್ಲಿಸುತ್ತಿದ್ದ ಮುಕುಲ್‌ ರೋಹಟಗಿ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ರೋಹಟಗಿ ಅವರು ತಮ್ಮನ್ನು ಮರು ನೇಮಕಕ್ಕೆ ಪರಿಗಣಿಸದಂತೆ ಮನವಿ ಮಾಡಿದ್ದರು. ಬಳಿಕ ವೇಣುಗೋಪಾಲ್‌ ಅವರನ್ನು ಆಯ್ಕೆ ಮಾಡಲಾಗಿತ್ತು.

ಸುಪ್ರೀಂಕೋರ್ಟ್‌ನಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲದಿಂದ ವಕೀಲ ವೃತ್ತಿಯಲ್ಲಿ ತೊಡಗಿರುವ ವೇಣುಗೋಪಾಲ್‌, ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.

ವೇಣುಗೋಪಾಲ್‌ ಅವರ ತಂದೆ ಎಂ.ಕೆ.ನಂಬಿಯಾರ್‌ ಸಹ ವಕೀಲರಾಗಿದ್ದರು.

1979ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿಯೂ ಅವರು ನೇಮಕಗೊಂಡಿದ್ದರು. ವೇಣುಗೋಪಾಲ್‌ ಅವರು ಪದ್ಮಭೂಷಣ ಗೌರವಕ್ಕೆ ಭಾಜನರಾಗಿದ್ದರು.

ಪ್ರತಿಕ್ರಿಯಿಸಿ (+)