ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂಡಾ ಕಾರುಗಳ ಬೆಲೆ ₹1.31 ಲಕ್ಷದವರೆಗೂ ಇಳಿಕೆ: ಜಿಎಸ್‌ಟಿ ಪರಿಣಾಮ

Last Updated 3 ಜುಲೈ 2017, 10:44 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾಗುತ್ತಿದ್ದಂತೆ ಹೋಂಡಾ ಸಂಸ್ಥೆ ಕಾರುಗಳ ಬೆಲೆಯನ್ನು ₹1.31 ಲಕ್ಷದವರೆಗೂ ಇಳಿಕೆ ಮಾಡಿದೆ.

ಜಿಎಸ್‌ಟಿ ಪರಿಣಾಮದಿಂದ ಹೋಂಡಾ ಸಂಸ್ಥೆಯ ಎಸ್‌ಯುವಿ ಸಿಆರ್‌–ವಿ ಕಾರುಗಳ ಬೆಲೆಯು ₹1,31,663ರಷ್ಟು ಕಡಿಮೆಯಾಗಿದೆ.ಬ್ರಿವೋ ಮಾದರಿ ಕಾರುಗಳ ಬೆಲೆ ₹12,279 ಇಳಿಕೆಯಾಗಿದ್ದು, ಅಮೇಜ್‌ ಕಾರುಗಳ ಬೆಲೆ ₹14,825 ಕಡಿಮೆಯಾಗಿದೆ.

ಇನ್ನೂ ಹೋಂಡಾ ಸಿಟಿ ₹16,510, ಜಾಜ್‌ ₹10,031, ಡಬ್ಲ್ಯುಆರ್‌–ವಿ ₹10,064 ಹಾಗೂ ಬಿಆರ್‌–ವಿ ಮಾದರಿ ಕಾರುಗಳ ಬೆಲೆಯಲ್ಲಿ ₹30,387ರಷ್ಟು ಇಳಿಕೆಯಾಗಿದೆ. 

ಈಗಾಗಲೇ ಮಾರುತಿ ಸುಜುಕಿ, ಫೋರ್ಡ್‌, ಟೊಯೋಟಾ, ಜಾಗ್ವಾರ್‌ ಲ್ಯಾಂಡ್‌ ರೋವರ್‌ ಹಾಗೂ ಬಿಎಂಡಬ್ಲ್ಯು ಕಾರು ಉತ್ಪಾದನಾ ಸಂಸ್ಥೆಗಳು ಜಿಎಸ್‌ಟಿ ಜಾರಿಯಿಂದ ಆದ ಬೆಲೆ ಕಡಿತವನ್ನು ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT