ಶನಿವಾರ, ಡಿಸೆಂಬರ್ 14, 2019
22 °C

ಜೂನ್ 30 ಮಧ್ಯರಾತ್ರಿ ಜನಿಸಿದ ಮಗುವಿಗೆ 'ಜಿಎಸ್‍ಟಿ' ಎಂದು ನಾಮಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನ್ 30 ಮಧ್ಯರಾತ್ರಿ ಜನಿಸಿದ ಮಗುವಿಗೆ 'ಜಿಎಸ್‍ಟಿ' ಎಂದು ನಾಮಕರಣ

ರಾಜಸ್ಥಾನ: ದೇಶದಾದ್ಯಂತ ಜುಲೈ1 ರಂದು ಜಿಎಸ್‍ಟಿ ಜಾರಿಗೆ ಬಂದ ನಂತರ ಎಲ್ಲೆಡೆ ಜಿಎಸ್‍ಟಿಯದ್ದೇ ಸುದ್ದಿ. ಸರಕು ಮತ್ತು ಸೇವಾ ತೆರಿಗೆಯ  ಪ್ರಯೋಜನ ಮತ್ತು ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ, ರಾಜಸ್ಥಾನದಲ್ಲಿನ 'ಜಿಎಸ್‍ಟಿ' ಮಗು ಗಮನ ಸೆಳೆಯುತ್ತಿದೆ.

ಜೂನ್ 30ರಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಎಸ್‍ಟಿ) ವ್ಯವಸ್ಥೆ ಬಗ್ಗೆ ಭಾಷಣ ಮಾಡುತ್ತಿದ್ದರೆ, ರಾಜಸ್ಥಾನದ ಬೇವಾ ಎಂಬಲ್ಲಿ ಹುಟ್ಟಿದ ಗಂಡು ಮಗುವಿಗೆ 'ಜಿಎಸ್‍ಟಿ' ಎಂದು ನಾಮಕರಣ ಮಾಡಲಾಗಿದೆ.

ಜೂನ್ 30 ಮಧ್ಯರಾತ್ರಿ 12.02ಕ್ಕೆ ಮಗು ಹುಟ್ಟಿದ್ದರಿಂದ ಆ ಮಗುವಿಗೆ ಜಿಎಸ್‍ಟಿ ಎಂಬ ಹೆಸರೇ ಸೂಕ್ತ ಎಂದು ಆ ಕುಟುಂಬದವರು ತೀರ್ಮಾನಿಸಿದ್ದಾರೆ.

ಮಗುವಿಗೆ ಜಿಎಸ್‌ಟಿ ಎಂದು ಹೆಸರಿಟ್ಟ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದಂತೆ ಬಿಜೆಪಿ ನಾಯಕರು ಆ ಕಂದಮ್ಮನಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಇಲ್ಲಿನ ಬಿಜೆಪಿ ವಕ್ತಾರ ನಳಿನ್ ಎಸ್ ಕೊಹ್ಲಿ ಅವರು ಜಿಎಸ್‍ಟಿ ಮಗುವಿನೊಂದಿಗೆ ಅಮ್ಮ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೊವನ್ನು ಟ್ವಿಟರ್‍‍ನಲ್ಲಿ ಶೇರ್ ಮಾಡಿ ನರೇಂದ್ರ ಮೋದಿ, ವಸುಂಧರಾ ರಾಜೆ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಈ ಟ್ವೀಟ್‍ನ್ನೇ ರೀಟ್ವೀಟ್ ಮಾಡಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಮಗುವಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)