ಶನಿವಾರ, ಡಿಸೆಂಬರ್ 7, 2019
24 °C

ಯೋಗ ಪ್ರಿಯೆ ಲೀಸಾ

Published:
Updated:
ಯೋಗ ಪ್ರಿಯೆ ಲೀಸಾ

ಆಸ್ಟ್ರೇಲಿಯಾದಲ್ಲಿ ಮಾಡೆಲಿಂಗ್ ಜೀವನ ಆರಂಭಿಸಿ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿರುವ ನಟಿ ಲೀಸಾ ಹೇಡನ್‌  ಎರಡು ಮಕ್ಕಳ ತಾಯಿಯಾದರೂ ಆಕರ್ಷಕ ಮೈಮಾಟ ಕಳೆದುಕೊಂಡಿಲ್ಲ. ಇದಕ್ಕೆ ಕಾರಣ ಅವರು ಮಾಡುವ ವ್ಯಾಯಾಮ.

ಬಾಲ್ಯದಿಂದಲೂ  ವ್ಯಾಯಾಮವನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆ ಇವರು. ಇವರಿಗೆ ವ್ಯಾಯಾಮದ ಕಲೆ ಒಲಿದಿದ್ದು ಅಮ್ಮನ ಮೂಲಕ. ಇವರ ಅಮ್ಮ 8 ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ವ್ಯಾಯಾಮಕ್ಕೂ ಸಮಯ ಮೀಸಲಿಡುತ್ತಿದ್ದರಂತೆ. ಆರೋಗ್ಯದ ಬಗೆಗಿನ ಅಮ್ಮನ ಕಾಳಜಿಯೇ ಮಗಳು ಲೀಸಾಗೂ ಒಲಿದಿದೆ. ಅದರಲ್ಲೂ ಯೋಗ ಮಾಡುವುದೆಂದರೆ ಇವರಿಗೆ ಹೆಚ್ಚು ಇಷ್ಟ. 

ಗೆಳೆಯರ ಒತ್ತಾಯಕ್ಕೆ ಮಣಿದು ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು. ಆಗ ಮಾಡೆಲಿಂಗ್‌ನಲ್ಲಿ ಬಿಳಿ ಬಣ್ಣದವರೇ ಹೆಚ್ಚಿದ್ದರೂ, ಮಾಡೆಲಿಂಗ್ ಕ್ಷೇತ್ರ ಲೀಸಾರ ಕೈಹಿಡಿಯಲು ಕಾರಣ ಅವರ ಮೈಮಾಟ. ಅದು ಬಂದದ್ದು ಯೋಗದಿಂದ. ಇವರು ತಮ್ಮ ಹದಿನೆಂಟನೇ ವಯಸ್ಸಿಗೆ ಯೋಗ ಶಿಕ್ಷಕಿ ಆಗಿದ್ದರು.

ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಮೇಲೆ ಲೀಸಾ ಅವರ ಫಿಟ್‌ನೆಸ್‌ ಪ್ರೀತಿ ಇನ್ನೂ ಹೆಚ್ಚಾಯಿತು. ನಿಯಮಿತಿ ಆಹಾರ ಸೇವನೆ, ಕಟ್ಟುನಿಟ್ಟಿನ ಜೀವನ ಕ್ರಮ ಅಳವಡಿಸಿಕೊಂಡರು. ಬಾಲಿವುಡ್‌ಗೆ ಬಂದು ಏಳು ವರ್ಷವಾದರೂ ಈಗಲೂ ಊಟದ ವಿಷಯದಲ್ಲಿ ಇವರು ಕಟ್ಟನಿಟ್ಟಿನ ಕ್ರಮವನ್ನೇ ಪಾಲಿಸುತ್ತಿದ್ದಾರೆ. 

ಬೆಳಿಗ್ಗೆ ಉಪಹಾರಕ್ಕೆ ಹಣ್ಣು ಮತ್ತು ಮೊಟ್ಟೆ ಸೇವಿಸುತ್ತಾರೆ. ಮಧ್ಯಾಹ್ನ ಊಟಕ್ಕೆ ಚಿಕನ್ ಮತ್ತು ಹಸಿ ತರಕಾರಿ, ರಾತ್ರಿ ಊಟಕ್ಕೆ ಕಡಿಮೆ ಎಣ್ಣೆ ಅಂಶವಿರುವ ಆಹಾರ. ಇದರ ಜೊತೆಗೆ ಗ್ರೀನ್ ಟೀ, ಫ್ರೂಟ್ ಸಲಾಡ್ ಮತ್ತು ಜ್ಯೂಸ್‌ಗಳನ್ನು ಸೇವಿಸುತ್ತಾರೆ.

ಮೈಮಾಟ- 34–27–34

ಉದ್ದ– 5.10 ಅಡಿ

ತೂಕ–53 ಕೆಜಿ

ವಯಸ್ಸು– 31

ಪ್ರತಿಕ್ರಿಯಿಸಿ (+)