ಭಾನುವಾರ, ಡಿಸೆಂಬರ್ 15, 2019
17 °C

ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಮೋದಿ ನಾಯಕತ್ವ ವಹಿಸಲಿ: ಬಾನ್‌ ಕಿ ಮೂನ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಮೋದಿ ನಾಯಕತ್ವ ವಹಿಸಲಿ: ಬಾನ್‌ ಕಿ ಮೂನ್‌

ನವದೆಹಲಿ: ಹವಾಮಾನ ವೈಪರೀತ್ಯ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನವನ್ನು ವಿಶ್ವಸಂಸ್ಥೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರು ಶ್ಲಾಘಿಸಿದ್ದಾರೆ. ಜತೆಗೆ ಮೋದಿ ಅವರು ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟವನ್ನು ಮುನ್ನಡೆಸಲಿ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿರುವ ಅವರು, ‘ಹಸಿರು ಮನೆ ಪರಿಣಾಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಪ್ರಯತ್ನ ಮಂಚೂಣಿಯಲ್ಲಿದೆ. ಮೋದಿ ಕೇವಲ ತಮ್ಮ ದೇಶದಲ್ಲಿ ಮಾತ್ರವೇ ಜನಪ್ರಿಯರಾಗಿಲ್ಲ ಬದಲಾಗಿ, ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದರಿಂದ ವಿಶ್ವಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ’ ಎಂದಿದ್ದಾರೆ.

ಮೋದಿ ಅವರು ಸೌರ ಶಕ್ತಿ ಬಳಕೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರೆ ನೀಡಿರುವ ಬಗ್ಗೆಯೂ ಮಾತನಾಡಿದ್ದು, ಹಲವು ಬಾರಿ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರ ನಾಯಕತ್ವವನ್ನು ಬೆಂಬಲಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಪ್ಯಾರಿಸ್‌ ಒಪ್ಪಂದ ಕುರಿತಂತೆ ಅಮೆರಿಕ ಧೋರಣೆಯ ಹೊರತಾಗಿಯೂ ಭಾರತ ಇದರ ಅನುಷ್ಟಾನಕ್ಕಾಗಿ ವಿಶ್ವದ ನಾಯಕತ್ವ ವಹಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಕೋರಿಯಾ ಯುದ್ಧದ ಸಂದರ್ಭದಲ್ಲಿ ಭಾರತ ನಿಡಿದ್ದ ನೆರವನ್ನು ಸಹ ನೆನಪಿಸಿಕೊಂಡ ಮೂನ್‌ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)