ಭಾನುವಾರ, ಡಿಸೆಂಬರ್ 15, 2019
21 °C

ಟಾಪ್‌ಗನ್‌ ಆಗಿ ಕ್ರೂಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಪ್‌ಗನ್‌ ಆಗಿ ಕ್ರೂಸ್

ಹಾಲಿವುಡ್‌ನ ಜನಪ್ರಿಯ ನಟ ಟಾಮ್‌ ಕ್ರೂಸ್‌ ಅಭಿನಯದ ‘ಟಾಪ್‌ ಗನ್‌’ ಸರಣಿಯ ಸಿನಿಮಾ ಮುಂದಿನ ವರ್ಷ ಜುಲೈ 12ಕ್ಕೆ ತೆರೆಗೆ ಬರಲಿದೆ.

ಪ್ಯಾರಾಮೌಂಟ್‌ ಚಿತ್ರ ನಿರ್ಮಾಣ ಸಂಸ್ಥೆ ಚಿತ್ರ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದೆ. ‘ಥ್ರೋನ್‌: ಲೆಗಸಿ’ ಚಿತ್ರ ನಿರ್ದೇಶಿಸಿದ ಜೋಸೆಫ್‌ ಕಸೆನ್ಸ್ಕಿಅವರೇ ಈ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಮುಂಚೆ ಜೋಸೆಫ್‌, 2013ರಲ್ಲಿ ಕ್ರೂಸ್‌ ಅವರೊಂದಿಗೆ ‘ಅಬ್‌ಲಿವಿಯನ್‌’ ಚಿತ್ರದಲ್ಲಿ ಕೆಲಸ ಮಾಡಿದ್ದರು.

ದೊಡ್ಡ ಬಜೆಟ್‌ ಚಿತ್ರ ‘ಮಿಷನ್‌ ಇಂಪಾಸಿಬಲ್‌’ ಎಂಬ ಸಾಹಸ ಪ್ರಧಾನ ಚಲನಚಿತ್ರ ಸರಣಿಯಲ್ಲಿ ಬೇಹುಗಾರನಾಗಿ ಅಭಿನಯಿಸಿ ಟಾಮ್ ಕ್ರೂಸ್ ಜನಪ್ರಿಯರಾದವರು.

‘ಟಾಪ್‌ ಗನ್‌’ ಚಿತ್ರದ ಮೊದಲ ಸರಣಿ 1986ರಲ್ಲಿ ತೆರೆಕಂಡಿತ್ತು. ಟೋನಿ ಸ್ಕಾಟ್‌ ಚಿತ್ರ ನಿರ್ದೇಶಿಸಿದ್ದರು. ಟಾಮ್‌ ಕ್ರೂಸ್‌ ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಒಂದು ವರ್ಷದವರೆಗೂ ಕಾಯುವಂತಾಗಿದೆ.

ಪ್ರತಿಕ್ರಿಯಿಸಿ (+)