ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನದ ಪ್ರಮಾಣ ಕನ್ನಡಿಯಲ್ಲೇ ನೋಡಿ!

Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ಪೆಟ್ರೋಲ್‌ ಬಂಕ್‌ಗೆ ಹೋಗಿ ‘ಇಷ್ಟು ಪೆಟ್ರೋಲ್‌/ ಡೀಸೆಲ್‌ ತುಂಬಿ’ ಎಂದು ಹೇಳಿ ವಾಹನದಲ್ಲೇ ಕುಳಿತು ಕತ್ತು ಹೊರಳಿಸಿ ಮೀಟರ್‌ ನೋಡುವುದು ಸಾಮಾನ್ಯ ನೋಟ. ಇನ್ನು ಕೆಲವರು ಕಾರಿನಿಂದಿಳಿದು ಮೀಟರ್‌ ಬೋರ್ಡ್‌ ನೋಡುತ್ತಾರೆ.

ಇದನ್ನು ಸಮಸ್ಯೆ ಅಂದುಕೊಂಡವರಿಗಾಗಿ ಹೆಣ್ಣೂರಿನ ವಿಜಯ ವಿಠಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಂಜುನಾಥ ಮತ್ತು ಆಯೆಷಾ ಅವರು ಪರಿಹಾರ ಕಂಡುಹಿಡಿದಿದ್ದಾರೆ. ಅವರು ಕಂಡುಹಿಡಿದರುವ ಪೆಟ್ರೋಲ್‌ ಪಂಪ್‌ಗೆ ಅಳವಡಿಸಬಹುದಾದ ಉಪಕರಣವೊಂದು ಕಾರಿನಿಂದ ಇಳಿಯದೇ ಮೀಟರ್‌ ವೀಕ್ಷಿಸುವ ಅವಕಾಶ ಕಲ್ಪಿಸುತ್ತದೆ.

ವಾಹನಕ್ಕೆ ಎಷ್ಟು ಲೀಟರ್ ಇಂಧನ ಹಾಕಲಾಗಿದೆ ಎಷ್ಟು ಮೊತ್ತವಾಗಿದೆ ಎಂಬುದನ್ನು ನಿಖರವಾಗಿ ಈ ಡಿಜಿಟಲ್ ಪೆಟ್ರೋಲ್‌ ಪಂಪ್ ತೋರಿಸುತ್ತದೆ. ಈ ರೀತಿಯ ಉಪಕರಣಗಳು ಈಗಾಗಲೇ ಇವೆಯಾದರೂ ಈ ಹುಡುಗರು ತಯಾರಿಸಿರುವ ಉಪಕರಣ ಭಿನ್ನ ಎನಿಸಿಕೊಳ್ಳುವುದಕ್ಕೆ ಕಾರಣ ಉಪಕರಣದಲ್ಲಿ ತಿರುವು–ಮುರುವಾಗಿ ಮೂಡುವ ಸಂಖ್ಯೆಗಳು. ಇದರಿಂದ ವಾಹನದಲ್ಲಿ ಕೂತೇ ಕನ್ನಡಿಯಲ್ಲಿ ನೋಡಿ ಪೆಟ್ರೋಲ್ ತುಂಬಲಾಗುತ್ತಿರುವ ಪ್ರಮಾಣ ನೋಡಬಹುದು.

ಈ ಉಪಕರಣ ವಯಸ್ಸಾದವರಿಗೆ ಮತ್ತು ಅಂಗವಿಕಲರಿಗೆ ಅನುಕೂಲ ಎನ್ನುತ್ತಾರೆ ಉಪಕರಣ ಅಭಿವೃದ್ಧಿ ಪಡಿಸಿರುವ ಮಂಜುನಾಥ ಮತ್ತು ಆಯೆಷಾ.

ಪೆಟ್ರೋಲ್ ಬಂಕ್‌ಗಳಲ್ಲಿ ವಾಹನದಿಂದ ಇಳಿದು ಅಥವಾ ಕೂತಲ್ಲಿಂದಲೇ ಹರಸಾಹಸಪಡುತ್ತಾ ಕತ್ತು, ನಡು ತಿರುಗಿಸಿ ಪೆಟ್ರೋಲ್ ತುಂಬುವವರೆಗೆ ನೋಡುತ್ತಾ ಕಷ್ಟಪಡುತ್ತಿದ್ದ ಹಿರಿಯ ಜೀವನಗಳನ್ನು ನೋಡಿದ ಮಂಜುನಾಥ್‌ ಮತ್ತು ಆಯೆಷಾಗೆ ಹಿರಿಯ ಜೀವಗಳ ಶ್ರಮ ತಗ್ಗಿಸಬೇಕು ಎನಿಸಿತ್ತು ಆಗ ಹೊಳೆದದ್ದೇ ಡಿಜಿಟಲ್ ಪೆಟ್ರೋಲ್ ಪಂಪ್ ಅಭಿವೃದ್ಧಿಪಡಿಸುವ ಐಡಿಯಾ.

ಸರಳವಾಗಿರುವ ಈ ಉಪಕರಣಕ್ಕೆ ಇವರು ಬಳಸಿರುವುದು ಸಣ್ಣ ಮೈಕ್ರೋ ಕಂಟ್ರೋಲರ್ ಚಿಪ್ ಮತ್ತು ಸಂಖ್ಯೆ ಮೂಡಲು ಪರದೆಯಷ್ಟೆ. ಇದಕ್ಕೆ ಇವರಿಗೆ ಆಗಿರುವ ಖರ್ಚು ₹2000. ಈ ಉಪಕರಣವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಉಮೇದು ವಿದ್ಯಾರ್ಥಿಗಳಿಗಿದೆ.

ಪ್ರಸ್ತುತ ಉಪಕರಣಕ್ಕೆ ಅಳವಡಿಸಿರುವ ವೈರ್‌ ಅನ್ನು ತೆಗೆದು ಬ್ಯಾಟರಿ ಅಳವಡಿಸಬೇಕು, ನಂತರ ಸ್ಕ್ರೀನ್ ಚಿಕ್ಕದು ಮಾಡಿ ಬಳಸಲು ಸುಲಭವಾಗುವಂತೆ ಮಾಡುವ ಯೋಜನೆ ಇವರಿಗಿದೆ.

ಇವರ ಈ ಸಂಶೋಧನಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತವರು ಇವರ ಮಾರ್ಗದರ್ಶಕ ಡಾ.ದಿನೇಶ್‌ ಅನ್ವೇಕರ್. ತಮ್ಮ ವಿದ್ಯಾರ್ಥಿಗಳ ಸಂಶೋಧನಾ ಪ್ರವೃತ್ತಿಯ ಬಗ್ಗೆ ಹೆಮ್ಮೆಯ ಮಾತನಾಡುವ ಇವರು. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಉಪಕರಣದ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದು ಕೆಲವೇ ದಿನಗಳಲ್ಲಿ ಪೇಟೆಂಟ್ ದೊರಕಲಿದೆ’ ಎನ್ನುತ್ತಾರೆ. 22ರ ಹರೆಯದ ಈ ಯುವಕರು ತಮ್ಮ ಈ ಸಂಶೋಧನೆ ಮೊದಲ ಹೆಜ್ಜೆಯಷ್ಟೆ ಎನ್ನುತ್ತಾರೆ, ‘ಇನ್ನಷ್ಟು ಯೋಜನೆಗಳು ಈಗಾಗಲೇ ತಲೆಯೊಳಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಳ್ಳಲಿದ್ದೇವೆ ಎನ್ನುತ್ತಾರೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT