ಶುಕ್ರವಾರ, ಡಿಸೆಂಬರ್ 13, 2019
20 °C

ನೀರಿನಲ್ಲಿ ಮೀನಾಗಿ ಸುಂದರ ಮೈಮಾಟ ನಿಮ್ಮದಾಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನಲ್ಲಿ ಮೀನಾಗಿ  ಸುಂದರ ಮೈಮಾಟ ನಿಮ್ಮದಾಗಿಸಿ

ಬಹುಭಾಷಾ ನಟಿ ತಾಪ್ಸಿ ಪನ್ನು ತನ್ನ ಫಿಟ್‌ನೆಸ್‌ ಬಗ್ಗೆ ಎಂದೂ ನಿರ್ಲಕ್ಷ್ಯ ಮಾಡುವವರಲ್ಲ. ದೇಹ ಸೌಂದರ್ಯ ಕಾಪಾಡಿಕೊಳ್ಳಲು ಈಗ ಹೊಸ ರೀತಿಯ ವ್ಯಾಯಾಮದ ಮೊರೆಹೋಗಿದ್ದಾರೆ ಅದು, ನೀರಿನಲ್ಲಿ ವ್ಯಾಯಾಮ ಮಾಡುವ ಹೈಡ್ರೊಪವರ್ ಫಿಟ್‌ನೆಸ್ ತಂತ್ರ.

ನೀರಿನಲ್ಲಿ ಮಾಡುವ ಈ ವ್ಯಾಯಾಮ ತಾಪ್ಸಿಗೆ ಹೆಚ್ಚು ಉಲ್ಲಾಸ ನೀಡುತ್ತಿದೆಯಂತೆ. ಜಿಮ್‌ಗೆ ಹೋಗಲು ಇಷ್ಟಪಡದ ತಾಪ್ಸಿಗೆ ಹೈಡ್ರೊಪವರ್ ವ್ಯಾಯಾಮ ಖುಷಿಕೊಡುತ್ತಿದೆ. ಹೈಡ್ರೊಪವರ್ ವ್ಯಾಯಾಮದಿಂದ ದೇಹ ಮತ್ತು ಮನಸ್ಸು ಎರಡಕ್ಕೂ ವ್ಯಾಯಾಮವಾದಂತಾಗುತ್ತದೆ. ಉಸಿರಿಗೆ ಸಂಬಂಧಿಸಿದ ವ್ಯಾಯಾಮವೂ ಇದರಲ್ಲಿರುವುದರಿಂದ ದೇಹ ಒಳಗಿನ ಆರೋಗ್ಯವೂ ಇದರಿಂದ ವೃದ್ಧಿ ಆಗುತ್ತದೆ ಎಂದು ತಾಪ್ಸಿ ತಮ್ಮ ಹೊಸ ರೀತಿಯ ವ್ಯಾಯಾಮದ ಬಗ್ಗೆ ಹೇಳಿದ್ದಾರೆ.

ದಕ್ಷಿಣ ಭಾರತ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ತಾಪ್ಸಿ ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಗಮನ ಸೆಳೆದವರು. ಈಗ ಬಾಲಿವುಡ್‌ನಲ್ಲೇ ನೆಲೆ ಊರಲು ಮಾಡುತ್ತಿರುವ ಪ್ರಯತ್ನ ಇದು ಎಂದು ತಾಪ್ಸಿ ಅವರ ಹೊಸ ರೀತಿಯ ವ್ಯಾಯಾಮದ ಬಗೆಗೆ ಬಾಲಿವುಡ್‌ ಮಂದಿ ಮಾತನಾಡುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)