ಶನಿವಾರ, ಡಿಸೆಂಬರ್ 7, 2019
16 °C

ಇದೇ 11ರಂದು ಗಾಂಧೀಜಿ ಅಪರೂಪದ ಚಿತ್ರ ಹರಾಜು

ಪಿಟಿಐ Updated:

ಅಕ್ಷರ ಗಾತ್ರ : | |

ಇದೇ 11ರಂದು ಗಾಂಧೀಜಿ ಅಪರೂಪದ ಚಿತ್ರ ಹರಾಜು

ಲಂಡನ್‌: ಪೆನ್ಸಿಲ್‌ನಲ್ಲಿ ರಚಿಸಿರುವ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಪರೂಪದ  ಚಿತ್ರ ಇದೇ 11ರಂದು ಇಲ್ಲಿ ಹರಾಜಾಗಲಿದೆ.

1931ರಲ್ಲಿ ಲಂಡನ್‌ನಲ್ಲಿ ನಡೆದ ‘ದುಂಡು ಮೇಜಿನ ಸಭೆ’ಯಲ್ಲಿ ಗಾಂಧೀಜಿ ಭಾಗವಹಿಸಿದ್ದಾಗ, ಕಲಾವಿದ ಜಾನ್ ಹೆನ್ರಿ ಆ್ಯಮ್‌ಸೆವಿಟ್ಜ್‌ ಈ ಚಿತ್ರವನ್ನು ರಚಿಸಿದ್ದರು.

ನೆಲದ ಮೇಲೆ ಕುಳಿತುಕೊಂಡಿರುವ ಗಾಂಧೀಜಿ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿರುವ ಚಿತ್ರ ಇದಾಗಿದೆ.   ‘Truth is God / MK Gandhi / 4.12.’31.’ ಎಂಬ ಪದಗಳು ಇದರಲ್ಲಿವೆ.

ಸುಮಾರು ₹6.72 ಲಕ್ಷದಿಂದ ₹10.09 ಲಕ್ಷದವರೆಗೆ ಈ ಕಲಾಕೃತಿ ಮಾರಾಟವಾಗುವ ನಿರೀಕ್ಷೆ ಇದೆ.  ಗಾಂಧೀಜಿ ತಂಗಿದ್ದ ಕಿಂಗ್‌ಸ್ಲೇ ಹಾಲ್‌ ಜೊತೆ ಸಂಪರ್ಕ ಹೊಂದಿದ್ದ ಸ್ಥಳೀಯರೊಬ್ಬರಿಗೆ ಈ ಚಿತ್ರವನ್ನು ನೀಡಲಾಗಿತ್ತು. ಈವರೆಗೆ ಅದು ಆ ಕುಟುಂಬದವರ ಬಳಿಯೇ ಇತ್ತು.

ಶರತ್‌ಚಂದ್ರ ಬೋಸ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಗಾಂಧಿ ಬರೆದಿದ್ದ  ಪತ್ರಗಳನ್ನೂ ಇದೇ ವೇಳೆ ಹರಾಜು ಮಾಡುವ ಸಂಸ್ಥೆ ಸೂತ್‌ಬೇ ತಿಳಿಸಿದೆ.

ಪ್ರತಿಕ್ರಿಯಿಸಿ (+)