ಬುಧವಾರ, ಡಿಸೆಂಬರ್ 11, 2019
25 °C

ಷೇರುಪೇಟೆಯ ಸಂಭ್ರಮದ ಸ್ವಾಗತ

Published:
Updated:
ಷೇರುಪೇಟೆಯ ಸಂಭ್ರಮದ ಸ್ವಾಗತ

ಮುಂಬೈ: ದೇಶಿ ಅರ್ಥ ವ್ಯವಸ್ಥೆ ಮೇಲೆ ದೂರಗಾಮಿ ಪರಿಣಾಮ ಬೀರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಬಂಡವಾಳ ಮಾರುಕಟ್ಟೆಯು ಸಂಭ್ರಮದ ಸ್ವಾಗತ ಕೋರಿದೆ.ಮುಂಬೈ ಷೇರುಪೇಟೆ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ  300  ಅಂಶಗಳ ಏರಿಕೆ ದಾಖಲಿಸಿತು. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳು (ಎಫ್‌ಎಂಸಿಜಿ) ಮತ್ತು ವಾಹನ ತಯಾರಿಕಾ ಸಂಸ್ಥೆಗಳ  ಷೇರುಗಳ ಮಾರಾಟ ಭರಾಟೆಯಿಂದ ಪೇಟೆಯಲ್ಲಿ ಉತ್ಸಾಹ ಗರಿಗೆದರಿತ್ತು.ಜಿಎಸ್‌ಟಿ ಜಾರಿಯಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ತುಂಬ ಅಗತ್ಯವಾಗಿರುವ ಉತ್ತೇಜನ ದೊರೆಯಲಿದೆ ಎನ್ನುವ ಆಶಾವಾದವು ಪೇಟೆಯಲ್ಲಿ ಕಂಡುಬಂದಿದೆ. ಸೂಚ್ಯಂಕವು ದಿನದ ವಹಿವಾಟಿನಲ್ಲಿ  300.01 ಅಂಶಗಳಷ್ಟು ಏರಿಕೆ ದಾಖಲಿಸಿ 31,221.62 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 94.10 ಅಂಶಗಳ ಏರಿಕೆ ಕಂಡು 9,615 ಅಂಶಗಳೊಂದಿಗೆ ದಿನದ ವಹಿವಾಟು ಕೊನೆಗೊಳಿಸಿತು.ಐಟಿಸಿ ಷೇರು ಬೆಲೆ ಏರಿಕೆ

ಸಿಗರೇಟ್‌ ತಯಾರಿಕಾ ಸಂಸ್ಥೆ ಐಟಿಸಿಯ ಷೇರುಬೆಲೆ ಶೇ 6ರಷ್ಟು ಏರಿಕೆ ಕಂಡಿತು. ಮಾರುಕಟ್ಟೆಯ ಬಂಡವಾಳ ಮೌಲ್ಯದ ಲೆಕ್ಕದಲ್ಲಿ ₹ 4 ಲಕ್ಷ ಕೋಟಿ ದಾಟಿದ ನಾಲ್ಕನೆ ಸಂಸ್ಥೆಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರತಿಕ್ರಿಯಿಸಿ (+)