ಶನಿವಾರ, ಡಿಸೆಂಬರ್ 7, 2019
16 °C

ಕಂಬಳ: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಬಳ: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಕಂಬಳಕ್ಕೆ ಸಂಬಂಧಿಸಿ­ದಂತೆ ರಾಜ್ಯ ಸರ್ಕಾರ ಹೊರಡಿ­ಸಿದ್ದ ಸುಗ್ರೀವಾಜ್ಞೆಗೆ ಸೋಮವಾರ ರಾಷ್ಟ್ರಪತಿಗಳ ಅಂಕಿತ ದೊರೆತಿದೆ.ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳಕ್ಕೆ ಅಡ್ಡಿಯಾಗಿದ್ದ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ ರಾಷ್ಟ್ರಪತಿಯವರ ಅಂಕಿತಕ್ಕಾಗಿ  ಕಳುಹಿಸಿ­ಕೊಡಲಾಗಿತ್ತು.ನಿಯಮಗಳಲ್ಲಿ ಕೆಲವು ನ್ಯೂನತೆ­ಗಳಿದ್ದುದರಿಂದ ಕೇಂದ್ರದ ಗೃಹ ಸಚಿವಾಲಯದ ಸಲಹೆಯ ಮೇರೆಗೆ ರಾಜ್ಯ ಸರ್ಕಾರವು,  ಜಲ್ಲಿಕಟ್ಟು ಪುನರಾರಂಭಕ್ಕೆ ರೂಪಿಸಿದ ಮಾದರಿಯಲ್ಲಿಯೇ ನಿಯಮ­ಗಳನ್ನು ರೂಪಿಸಿ ಮಸೂದೆಯನ್ನು ಮರಳಿ ಅನುಮೋದನೆಗೆ ಕಳುಹಿಸಿತ್ತು. ಏತನ್ಮಧ್ಯೆ ಸರ್ಕಾರ ಈ ಮಸೂದೆ ಜಾರಿಗಾಗಿ ಸುಗ್ರೀವಾಜ್ಞೆ ಹೊರಡಿಸಿತ್ತು.

ಪ್ರತಿಕ್ರಿಯಿಸಿ (+)