ಶುಕ್ರವಾರ, ಡಿಸೆಂಬರ್ 6, 2019
17 °C

ಆಹಾರದ ನೆಪವೊಡ್ಡಿ ಸಂವಿಧಾನದ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾರದ ನೆಪವೊಡ್ಡಿ ಸಂವಿಧಾನದ ಮೇಲೆ ದಾಳಿ

ಹೊಸಪೇಟೆ: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಹಾರದ ಹಕ್ಕಿನ ಮೇಲೆ ದಾಳಿ ನಡೆಸುವ ನೆಪದಲ್ಲಿ ನೇರವಾಗಿ ಸಂವಿಧಾನದ ಮೇಲೆ ಪ್ರಹಾರ ಮಾಡಲಾಗುತ್ತಿದೆ ಎಂದು ಸಿಪಿಎಂ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.

‘ಸಮಾನತೆಗಾಗಿ ಸಹಪಯಣ’ ವೇದಿಕೆ ಅಡಿಯಲ್ಲಿ 23 ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವ ದಲ್ಲಿ ಸೋಮವಾರ ಸಂಜೆ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.

‘ದೇಶದ ಜನರ ಬದುಕಿಗಿಂತ ಆಹಾರದ ವಿಷಯವೇ ಮುನ್ನೆಲೆಗೆ ಬಂದಿರುವುದು ದುರದೃಷ್ಟಕರ ಸಂಗತಿ. ಇಂತಹ ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಜನರನ್ನು ಒಡೆದು ಆಳುತ್ತಿವೆ’ ಎಂದು ಆರೋಪಿಸಿದರು.

‘ಧರ್ಮ, ಆಹಾರದ ವಿಷಯದಲ್ಲಿ ದೇಶದಲ್ಲಿ ಎಂದೂ ಪಕ್ಷಗಳು ರಾಜ ಕಾರಣ ಮಾಡಿರಲಿಲ್ಲ. ಆದರೆ, ಕೇಂದ್ರ ದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬೆಳವಣಿಗೆಗಳು ನಡೆಯು ತ್ತಿವೆ. ಭಾರತದಂತಹ ಪ್ರಜಾಪ್ರಭುತ್ವ ದೇಶಕ್ಕೆ ಇದು ಮಾರಕ’ ಎಂದು ಹೇಳಿದರು. ‘ಮನುವಾದಿಗಳ ವರ್ತನೆಯನ್ನು ಟೀಕಿಸಿದರೆ ಅಂತಹವರನ್ನು ದೇಶದ್ರೋಹಿಗಳೆಂದು ಪಟ್ಟ ಕಟ್ಟಲಾಗು ತ್ತಿದೆ. ಶೈಕ್ಷಣಿಕ ಕೇಂದ್ರಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ಬಲಹೀನಗೊಳಿಸ ಲಾಗುತ್ತಿದೆ’ ಎಂದು ತಿಳಿಸಿದರು.

‘ರಾಷ್ಟ್ರೀಯತೆ ಹೆಸರಿನಲ್ಲಿ ಕೆಲವರು ವಾಕ್‌ ಸ್ವಾತಂತ್ರ್ಯವನ್ನು ಮೊಟಕುಗೊಳಿ ಸಲು ಮುಂದಾಗಿದ್ದಾರೆ. ಬೇರೆಯವರ ಅಭಿಪ್ರಾಯವನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಪ್ರತಿಕ್ರಿಯಿಸಬೇಕೇ ಹೊರತು ದಾಳಿ ನಡೆಸುವುದು ಸಂಸ್ಕೃತಿಯಲ್ಲ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ‘ಸನಾತನ ಪರಂಪರೆಯಲ್ಲಿ ಗೋಮಾಂಸ ಭಕ್ಷಣೆಗೆ ಸಾಮಾಜಿಕ ಮನ್ನಣೆ ಇತ್ತು. ಮನೆಗೆ ಬಂದ ಅತಿಥಿಗಳಿಗೆ ಗೋಮಾಂಸ ಬಡಿಸಲಾಗುತ್ತಿತ್ತು. ಸ್ವತಃ ಸೀತೆಯೇ ಶ್ರೀರಾಮನಿಗೆ ಎಳೆ ಕರುವಿನ ಮಾಂಸ ದೂಟ ಮಾಡಿ ಬಡಿಸುತ್ತಿದ್ದಳು ಎಂದು ಮಹರ್ಷಿ ವಾಲ್ಮೀಕಿ ಬರೆದಿದ್ದಾರೆ’ ಎಂದರು.

‘ಇಂದು ಗೋರಕ್ಷಕರೆಂದು ಹೇಳಿ ಕೊಂಡು ಓಡಾಡುತ್ತಿರುವವರ ಪೂರ್ವ ಜರು ಕಟ್ಟಾ ಗೋ ಮಾಂಸ ಭಕ್ಷಕರಾಗಿದ್ದರು. ದೇಶದಲ್ಲಿ ಯಾವಾಗ ಜೈನ, ಬೌದ್ಧ ಧರ್ಮಗಳ ಉಗಮ ಆಯಿತೋ ಆಗ ಅವುಗಳ ತತ್ವ ಸಿದ್ಧಾಂತಗಳಿಗೆ ಸನಾತನಿಗಳು ಮಾರು ಹೋಗಿ ಮಾಂಸಾಹಾರ ತ್ಯಜಿಸಿದರು’ ಎಂದು ಹೇಳಿದರು.

ದಲಿತ ಹಕ್ಕುಗಳ ಸಮಿತಿ ಸಂಚಾಲಕ ಜಂಬಯ್ಯ ನಾಯಕ, ಎ. ಕರುಣಾನಿಧಿ, ಕೆ. ರಮೇಶ್‌, ಎಸ್‌. ಸತ್ಯಮೂರ್ತಿ, ಗೋಪಾಕೃಷ್ಣ ಅರಳಿಹಳ್ಳಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಮಲ್ಲಿ ಕಾರ್ಜುನ ಮಾನ್ಪಡೆ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)