ಭಾನುವಾರ, ಡಿಸೆಂಬರ್ 8, 2019
25 °C

ಟೊಮೆಟೊ ದುಬಾರಿ; ಇಳಿಯುತ್ತಿದೆ ಬೀನ್ಸ್ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೊಮೆಟೊ ದುಬಾರಿ; ಇಳಿಯುತ್ತಿದೆ ಬೀನ್ಸ್ ಬೆಲೆ

ಮೈಸೂರು: ಟೊಮೆಟೊಗೆ ಹೆಚ್ಚಿನ ಬೆಲೆ ಬಂದಿದ್ದು, ಬೆಳೆಗಾರರಿಗೆ ಕೈತುಂಬ ಹಣ ಸೇರುವಂತಾಗಿದೆ. ಇಲ್ಲಿನ ಎಪಿಎಂಸಿ ಸಗಟು ಮಾರು ಕಟ್ಟೆಯಲ್ಲಿ ಸೋಮವಾರ ಕೆ.ಜಿವೊಂದಕ್ಕೆ ಸಗಟು ಧಾರಣೆ ₹ 41ರಿಂದ ₹ 45ರವರೆಗೆ ಮಾರಾಟವಾಗಿತ್ತು. ಕಳೆದ ವಾರ ಇದರ ದರ ₹ 32 ಇತ್ತು. ದಿನದಿಂದ ದಿನಕ್ಕೆ ದರ ಹೆಚ್ಚುತ್ತಿದೆ.

ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಕಡಿಮೆಯಾಗಿಲ್ಲ. ಸೋಮವಾರ ಒಂದೇ ದಿನ 2,919 ಕ್ವಿಂಟಲ್‌ನಷ್ಟು ಟೊಮೆಟೊ ಎಪಿಎಂಸಿಗೆ ಬಂದಿತ್ತು. ಕೇರಳದಲ್ಲಿ ಮಳೆ ಹೆಚ್ಚಾಗಿರುವುದರಿಂದ ಅಲ್ಲಿನ ತರಕಾರಿ ಬೆಳೆಗಳೆಲ್ಲ ನಾಶವಾಗಿವೆ. ಒಂದೆರಡು ತಿಂಗಳವರೆಗೆ ಯಾವುದೇ ತರಕಾರಿಗಳು ಅಲ್ಲಿ ಬೆಳೆಯುವುದು ಕಷ್ಟಕರ. ಹಾಗಾಗಿ, ಕೇರಳ ವರ್ತಕರಿಗೆ ಟೊಮೆಟೊಗೆ ಹೆಚ್ಚಿನ ಬೇಡಿಕೆ ಇರುವುದರಿಂದಲೇ ದರ ಹೆಚ್ಚುತ್ತಿದೆ ಎಂದು ವರ್ತಕ ಸೋಮಣ್ಣ ತಿಳಿಸಿದರು.

ಬೀನ್ಸ್ ಮತ್ತು ಎಲೆಕೋಸಿನ ಧಾರಣೆ ತಹಂಬದಿಗೆ ಬಂದಿದೆ. ಕೆ.ಜಿ.ವೊಂದಕ್ಕೆ ₹ 80 ತಲುಪಿದ್ದ ಬೀನ್ಸ್ ಈಗ ₹ 33ರಿಂದ 35ರವರೆಗೆ ಮಾರಾಟವಾಗುತ್ತಿದೆ. ₹ 12ಕ್ಕೆ ಮಾರಾಟವಾಗುತ್ತಿದ್ದ ಎಲೆಕೋಸು ಈಗ ₹ 7ಕ್ಕೆ ಕುಸಿದು, ಬೆಳೆಗಾರರಿಗೆ ನಷ್ಟ ಉಂಟು ಮಾಡುತ್ತಿದೆ.

ಕೋಳಿಮೊಟ್ಟೆ ಸ್ಥಿರ; ಕೋಳಿ ಮಾಂಸ ಇಳಿಕೆ: ಕಳೆದ ವಾರದಿಂದ ಏರಿಕೆಯ ಹಾದಿ ಹಿಡಿದಿದ್ದ ಕೋಳಿ ಮೊಟ್ಟೆ ಧಾರಣೆ ಈ ವಾರ ಸ್ಥಿರವಾಗಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ₹ 4.10ರಲ್ಲೇ ಮುಂದುವರಿದಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಹಾಗೂ ಬ್ರೀಡರ್ಸ್ ಅಸೋಸಿಯೇಷನ್‌ನ ಫಾರಂ ಕೋಳಿ ಸಗಟು ದರ ಕೆ.ಜಿಗೆ ₹ 99 ಇದ್ದದ್ದು ₹ 113ಕ್ಕೆ ಹೆಚ್ಚಿದೆ. ಕರ್ಲ್ ಬರ್ಡ್ ದರ ₹ 100ರಿಂದ ₹ 85ಕ್ಕೆ ಕಡಿಮೆಯಾಗಿದೆ.

ಪ್ರತಿಕ್ರಿಯಿಸಿ (+)