ಶುಕ್ರವಾರ, ಡಿಸೆಂಬರ್ 6, 2019
17 °C

ಜಯಲಲಿತಾ ಕೊಡನಾಡು ಎಸ್ಟೇಟ್‌ನ ಲೆಕ್ಕಿಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಯಲಲಿತಾ ಕೊಡನಾಡು ಎಸ್ಟೇಟ್‌ನ ಲೆಕ್ಕಿಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಉಧಗಮಂಡಲಂ(ತಮಿಳುನಾಡು): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಗೆ ಸೇರಿದ ಕೊಡನಾಡು ಎಸ್ಟೇಟ್‌ನ ಲೆಕ್ಕಿಗ ದಿನೇಶ್‌ ಕುಮಾರ್‌ (28)  ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಎಸ್ಟೇಟ್‌ಗೆ ಸಮೀಪದ ಕೊಥಗಿರಿಯಲ್ಲಿನ ನಿವಾಸದಲ್ಲಿ ದಿನೇಶ್‌ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಸ್ಟೇಟ್‌ಗೆ ಸಂಬಂಧಿಸಿದಂತೆ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ.

ಕೆಲಸ ಹಾಗೂ ಜೀವನ ನಿರ್ವಹಣೆ ಕುರಿತಾಗಿ ಎಸ್ಟೇಟ್‌ನ ಇತರೆ ಸಿಬ್ಬಂದಿಯೊಂದಿಗೆ ದಿನೇಶ್‌ ಎರಡು ದಿನಗಳ ಹಿಂದೆ ಚರ್ಚಿಸಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

ಕೊಡನಾಡು ಎಸ್ಟೇಟ್‌ಗೆ ಏಪ್ರಿಲ್ 24ರಂದು  ನುಗಿದ್ದ ದುಷ್ಕರ್ಮಿಗಳು ಕಾವಲುಗಾರರ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಓಂ ಬಹದ್ದೂರ್‌ (51ವರ್ಷ) ಮೃತಪಟ್ಟಿದ್ದರು. ಘಟನೆಯ ಬಳಿಕ ಕೆಲವೇ ದಿನಗಳಲ್ಲಿ ಈ ಪ್ರಕರಣದ ಶಂಕಿತ ಆರೋಪಿಗಳಲ್ಲಿ ಇಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾದರು.

ದಿನೇಶ್‌ ಕುಮಾರ್‌ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಕೊಥಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಲಿದೆ.

ಪ್ರತಿಕ್ರಿಯಿಸಿ (+)