ಶುಕ್ರವಾರ, ಡಿಸೆಂಬರ್ 6, 2019
19 °C

ಕಡಿಯಾಳಿ ವಾರ್ಡ್ ನಾಗರಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಿಯಾಳಿ ವಾರ್ಡ್ ನಾಗರಿಕರ ಪ್ರತಿಭಟನೆ

ಉಡುಪಿ: ಇಲ್ಲಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಒಬ್ಬ ನಾಗರಿಕನ ಮೇಲೆ ಹಲ್ಲೆ ನಡೆಸಿದ ಸದಸ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಡಿಯಾಳಿ ವಾರ್ಡ್ ಸದಸ್ಯೆ ಗೀತಾ ಶೇಟ್ ಆಗ್ರಹಿಸಿದ್ದಾರೆ.

ನಗರಸಭೆ ಸಾಮಾನ್ಯಸಭೆ ನಡೆಯುವ ವೇಳೆ ಸದಸ್ಯೆಯ ಹಾಗೂ ನಾಗರಿಕರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕಡಿಯಾಳಿ ವಾರ್ಡ್ ನಾಗರಿಕರು ಸೋಮವಾರ ಕಡಿಯಾಳಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗೀತಾ, ‘ಸಾಮಾನ್ಯಸಭೆಯಲ್ಲಿ ಒಬ್ಬ ನಾಗರಿಕನಿಗೆ ಮೇಲೆ ಹಲ್ಲೆ ಮಾಡಿರುವುದು ಖಂಡ ನೀಯ. ಒಂದು ವೇಳೆ ಸಭೆಗೆ ಸಾರ್ವಜನಿ ಕರಿಗೆ ಪ್ರವೇಶ ಇಲ್ಲವಾಗಿದ್ದರೆ ರೋನಿ ಡಿಮೆಲ್ಲೊ ಅವರನ್ನು ತಡೆಯಬಹುದಾಗಿತ್ತು. ಅದನ್ನು ಬಿಟ್ಟು ಏಕಾಏಕಿಯಾಗಿ ಹಲ್ಲೆ ನಡೆಸಿರುವುದು ಆಘಾತ ಉಂಟು ಮಾಡಿದೆ.

ನಿಯಮಗಳ ಅರಿವಿಲ್ಲದೆ ಸಭಾಂಗಣದೊಳಗೆ ಪ್ರವೇಶಿಸಿದ ರೋನಿ ಮೇಲೆ ಕಾಂಗ್ರೆಸ್ ಸದಸ್ಯರು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ನನ್ನ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿದರು.

ರೋನಿ ಡಿಮೆಲ್ಲೊ ಮಾತನಾಡಿ, ‘ನಾನು ಎಲ್ಲಿ ಸತ್ಯವನ್ನು ಹೇಳುತ್ತೇನೆ ಎನ್ನುವ ಭಯದಲ್ಲಿ ನಗರಸಭೆಯ ಕಾಂಗ್ರೆಸ್ ಸದಸ್ಯರು ನನ್ನ ಮೇಲೆ ಹಲ್ಲೆ ಮಾಡುವ ಮೂಲಕ ಕ್ರೌರ್ಯ ಮೆರೆದಿದ್ದಾರೆ’ ಎಂದು ದೂರಿದರು.\ ಮಾಜಿ ಶಾಸಕ ಕೆ.ರಘುಪತಿ ಭಟ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ್ ಭಟ್, ಶ್ರೀನಿವಾಸ ಉಪಸ್ಥಿತರಿದ್ದರು.

* * 

ನನ್ನ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ಇಂತಹ ಘಟನೆಗಳು ಮುಂದಿನ ದಿನದಲ್ಲಿ ಮರುಕಳಿಸಬಾರದು.

ರೋನಿ ಡಿಮೆಲ್ಲೊ

ಹಲ್ಲೆಗೆ ಒಳಗಾದವರು

ಪ್ರತಿಕ್ರಿಯಿಸಿ (+)