ಬುಧವಾರ, ಡಿಸೆಂಬರ್ 11, 2019
24 °C

ಗರುಡ: ಪೊಲೀಸ್‌ ಅವತಾರದಲ್ಲಿ ಶ್ರೀನಗರ ಕಿಟ್ಟಿ

Published:
Updated:
ಗರುಡ: ಪೊಲೀಸ್‌ ಅವತಾರದಲ್ಲಿ ಶ್ರೀನಗರ ಕಿಟ್ಟಿ

ಬೆಂಗಳೂರು: ನಟ ಶ್ರೀನಗರ ಕಿಟ್ಟಿ ‘ಗರುಡ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿಪಾಯಿ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿರುವ ಸಿದ್ದಾರ್ಥ್‌ ಮಹೇಶ್‌ ನಟನೆಯ ಗರುಡ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಖಡಕ್‌ ಪೊಲೀಸ್‌ ಅಧಿಕಾರಿ ಗೆಟಪ್‌ನಲ್ಲಿ ಈಗಾಗಲೇ ಫೋಟೋ ಶೂಟ್‌ ಮುಗಿಸಿರುವ ಕಿಟ್ಟಿ ಶ್ರೀಘ್ರವೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಧನುಕುಮಾರ್‌ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ರಘು ದೀಕ್ಷಿತ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಅಶಿಕಾ ರಂಗನಾಥ್‌, ಐಂದ್ರಿಯಾ ರೇ ಮುಂತಾದವರ ಅಭಿನಯವಿದೆ.

ಪ್ರತಿಕ್ರಿಯಿಸಿ (+)