ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿ ಬಳಿಕ ಸಬ್ಸಿಡಿ ಸಹಿತ ಅಡುಗೆ ಅನಿಲ ದರ ₹32ರ ವರೆಗೆ ಹೆಚ್ಚಳ

Last Updated 4 ಜುಲೈ 2017, 12:32 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ಬಳಿಕ ಸಬ್ಸಿಡಿ ಸಹಿತ ಅಡುಗೆ ಅನಿಲ ಪ್ರತಿ ಸಿಲಿಂಡರ್‌ ಬೆಲೆ ₹32ರ ವರೆಗೆ ಹೆಚ್ಚಳವಾಗಿದ್ದು, ಇದು ಆರು ವರ್ಷದಲ್ಲಿ ಕಂಡ ಅತಿ ಹೆಚ್ಚಿನ ಏರಿಕೆಯಾಗಿದೆ.

ಜುಲೈ 1ರಂದು ಜಿಎಸ್‌ಟಿ ಜಾರಿ ಬಳಿಕ ದೆಹಲಿಯಲ್ಲಿ 14.2 ಕೆ.ಜಿ.ಯ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ₹446.65ರಿಂದ ₹477.46ಕ್ಕೆ ಏರಿಕೆಯಾಗಿದೆ.

ರಾಜ್ಯಗಳಲ್ಲಿ ಜಾರಿ ಇರುವ ತೆರಿಗೆಗೆ ಅನುಗುಣವಾಗಿ ದರದಲ್ಲಿ ಹೆಚ್ಚಳ ಆಗಲಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ.

ಕೋಲ್ಕತ್ತದಲ್ಲಿ ಪ್ರತಿ ಸಿಲಿಂಡರ್‌ಗೆ ₹31.67 ಹೆಚ್ಚಳವಾಗಿದ್ದು, ₹480.32ಕ್ಕೆ ಹೆಚ್ಚಿದೆ ಮತ್ತು ಚೆನ್ನೈನಲ್ಲಿ ₹465.56ಕ್ಕೆ ಹೆಚ್ಚಳವಾಗಿದೆ ಎಂದು ತೈಲ ಕಂಪೆನಿಗಳು ಮಾಹಿತಿ ನೀಡಿವೆ.

ಮುಂಬೈನಲ್ಲಿ ಶೇಕಡಾ 3ರಷ್ಟು ವ್ಯಾಟ್‌ ಅನ್ವಯವಾಗಲಿದ್ದು, ಪ್ರತಿ ಸಿಲಿಂಡರ್‌ ಬೆಲೆ ₹14.28 ಹೆಚ್ಚಳವಾಗಿದ್ದು, ₹491.25ಕ್ಕೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT