ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರಿಗೂ ಗಿಡ್ಡ ಪ್ಯಾಂಟು

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಪುರುಷರಿಗೆ ಹೆಣ್ಣು ಮಕ್ಕಳಷ್ಟು ಫ್ಯಾಷನ್ ಆಯ್ಕೆಗಳಿಲ್ಲ ಎಂದು ಈಗ ದೂರುವಂತಿಲ್ಲ. ಹುಡುಗರಿಗೂ ದಿನಕ್ಕೊಂದು ಹೊಸ ಟ್ರೆಂಡ್‌ ಹುಟ್ಟಿಕೊಳ್ಳುತ್ತಲೇ ಇವೆ. ಅವುಗಳಲ್ಲಿ ಒಂದು–ಮತ್ತೆ ಬಂದಿರುವ‘ಆ್ಯಂಕಲ್ ಲೆಂತ್‌’ ಪ್ಯಾಂಟ್.

ನೋಡಲು ಪೆನ್ಸಿಲ್ ಕಟ್ ಪ್ಯಾಂಟ್‌ನಂತೆ ಕಾಣುವ ಈ ಗಿಡ್ಡ ಪ್ಯಾಂಟ್‌ ಪಾದಕ್ಕಿಂತ ಸ್ವಲ್ಪ ಮೇಲೆ ಇರುತ್ತವೆ. ಬರ್ಮುಡಾ ಚಡ್ಡಿಗಿಂತ ಥ್ರೀ ಫೋರ್ತ್‌ ಎಂಬ ಮುಕ್ಕಾಲು ಪ್ಯಾಂಟ್‌ಗಿಂತಲೂ ಕೆಳಗಿಳಿದಿರುವ ಆದರೆ ಸಾಧಾರಣ ಪ್ಯಾಂಟ್‌ಗಿಂತಲೂ ಗಿಡ್ಡವಾಗಿರುವ ಪ್ಯಾಂಟ್‌ಗಳಿವು.

ಇಟಾಲಿಯನ್ ಸ್ಟೈಲ್ ಎನ್ನಲಾಗುವ ಆ್ಯಂಕಲ್ ಲೆಂತ್ ಪ್ಯಾಂಟ್ ಈ ಮುಂಚೆ ಜೀನ್ಸ್‌ ಪ್ಯಾಂಟುಗಳಲ್ಲಿ ಮಾತ್ರ ದೊರಕುತ್ತಿತ್ತು. ಆದರೆ ಈಗ ಎಲ್ಲ ರೀತಿಯ ಪ್ಯಾಂಟುಗಳಲ್ಲೂ ಇವು ಲಭ್ಯ. ಬ್ಲೇಜರ್‌ ಧರಿಸಿ, ಟೈ ಹಾಕಿ, ಆ್ಯಂಕಲ್ ಲೆಂತ್ ಪ್ಯಾಂಟ್ ಧರಿಸಿ ಕಚೇರಿಗೆ ಹೋಗುವವರು ಮೆಟ್ರೊ ನಗರಗಳಲ್ಲಿ ಹೆಚ್ಚು ಹೆಚ್ಚು ಕಾಣಸಿಗುತ್ತಿದ್ದಾರೆ. ಇದು ಈ ವಿನ್ಯಾಸದ ಪ್ಯಾಂಟ್‌ ಮಾಡಿರುವ ಮೋಡಿಗೆ ಸಾಕ್ಷಿ.

ತಮ್ಮ ಸಾಮಾನ್ಯ ಪೆನ್ಸಿಲ್ ಕಟ್ ಪ್ಯಾಂಟ್ ಅನ್ನು ಅಥವಾ ಸ್ಲಿಮ್ ಪ್ಯಾಂಟ್‌ ಅನ್ನು ಮಡಿಚಿ ಆ್ಯಂಕಲ್ ಲೆಂತ್ ಪ್ಯಾಂಟ್‌ ಆಗಿ ಬದಲಾಯಿಸಿ ಧರಿಸುವವರೂ ಹೆಚ್ಚಾಗಿದ್ದಾರೆ.

ಈ ರೀತಿಯ ಪ್ಯಾಂಟ್ ಎಲ್ಲರಿಗೂ ಒಪ್ಪುತ್ತದೆ. ಪ್ಯಾಂಟ್‌ ಅಳತೆ ಎಷ್ಟೇ ಇದ್ದರೂ ಅದನ್ನು ಆ್ಯಂಕಲ್ ಲೆಂತ್ ಪ್ಯಾಂಟ್ ಆಗಿ ಬದಲಾಯಿಸಿಕೊಳ್ಳಬಹುದು ಎಂಬುದು ಈ ಟ್ರೆಂಡ್ ಹೆಚ್ಚಾಗಲು ಕಾರಣ. ಹಳೆಯ ಪ್ಯಾಂಟುಗಳನ್ನೇ ಕತ್ತರಿಸಿಕೊಂಡರೂ ಆಯಿತು. ಚಪ್ಪಲಿ, ಶೂ ತಾಗಿ ತಾಗಿ ಹರಿದ ಕಾರಣಕ್ಕೆ ವಾರ್ಡ್‌ರೋಬ್‌ನಲ್ಲಿ ಕೆಳಗೆ ಒತ್ತಿಟ್ಟಿದ್ದ ಪ್ಯಾಂಟುಗಳನ್ನೂ ಈಗ ಕತ್ತರಿಸಿ ಮತ್ತೊಂದು ಹೊಲಿಗೆ ಹಾಕಿಸಿದರೂ ಈ ಹೊಸ ಬಗೆಯ ಪ್ಯಾಂಟ್‌ ಸಿದ್ಧವಾಗುತ್ತದೆ!

 ಬಾಲಿವುಡ್ ಸ್ಟಾರ್ ಮತ್ತು ಕ್ರೀಡಾ ತಾರೆಗಳು ಕೂಡಾ ಈ ಟ್ರೆಂಡ್‌ಗೆ ಮಾರು ಹೋಗಿದ್ದಾರೆ. ವಿರಾಟ್ ಕೋಹ್ಲಿ, ನಟ ಸಿದ್ದಾರ್ಥ್ ಕಪೂರ್, ಧವಳ್‌ ಕುಲಕರ್ಣಿ ಅವರೆಲ್ಲರೂ ಆ್ಯಂಕಲ್ ಲೆಂತ್ ಪ್ಯಾಂಟ್ ಧರಿಸಿದ್ದನ್ನು ನೀವೂ ನೋಡಿರುತ್ತೀರಿ.

ಕಾಟನ್, ಜೀನ್ಸ್, ಲಿನನ್‌ ಬಟ್ಟೆಗಳಲ್ಲಿ ಆ್ಯಂಕಲ್ ಲೆಂತ್ ಪ್ಯಾಂಟ್‌ಗಳು ಈಗ ಶೋರೂಮ್‌ಗಳಲ್ಲಿಯೂ ಲಭ್ಯ.

ಬಣ್ಣಗಳಲ್ಲಿ ಸಾಕಷ್ಟು ಆಯ್ಕೆಯೂ ಇದೆ. ಹೀಗೆ, ಇದನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣವಿದೆ.

ಫಾರ್ಮಲ್ ಮತ್ತು ಪಾರ್ಟಿ ಲುಕ್‌ಗೆ ಹೊಂದಿಕೆಯಾಗುವ ಬಣ್ಣಗಳಲ್ಲೂ ಈ ಪ್ಯಾಂಟ್‌ಗಳು ಲಭ್ಯ.

 ಈ ಪ್ಯಾಂಟ್ ಎಲ್ಲ ರೀತಿಯ ಶರ್ಟ್ ಮತ್ತು ಟಿ ಶರ್ಟ್‌ಗಳೊಂದಿಗೆ ಹೊಂದಿಕೆಯಾಗುವುದು ಇದರ ಹೆಚ್ಚುಗಾರಿಕೆ. ಬ್ಲೇಜರ್‌ಗಳೊಂದಿಗೆ ಕೂಡ ಈ ಪ್ಯಾಂಟ್‌ ಅನ್ನು ಧರಿಸಬಹುದು.v

**

ಆ್ಯಂಕಲ್ ಲೆಂತ್ ಪ್ಯಾಂಟ್ ಹಾಕಿದಾಗ ಶೂ ಧರಿಸುವುದು ಉತ್ತಮ. ಆದರೆ ಸಾಕ್ಸ್‌ ಧರಿಸುವುದು ಬೇಡ. ಸಾಕ್ಸ್ ಧರಿಸಲೇಬೆಕು ಎನ್ನುವವರು ತೆಳು ಬಣ್ಣದ ಸಾಕ್ಸ್ ಧರಿಸಿ.

ಶೂ ಆಯ್ಕೆ ಪ್ಯಾಂಟಿನ ಬಣ್ಣಕ್ಕೆ ಪೂರಕವಾಗಿರಲಿ. ಬೂಟ್‌ ಸಹ ಧರಿಸಬಹುದು.

ಕೊಳ್ಳುವ ಮುನ್ನ...
ಸ್ಲಿಮ್ ಆಗಿರುವ ಆ್ಯಂಕಲ್ ಲೆಂತ್ ಪ್ಯಾಂಟುಗಳನ್ನೇ ಕೊಳ್ಳಿ. ದೊಗಳೆ ಪ್ಯಾಂಟುಗಳು ಬೇಡ.

ಬಣ್ಣದ ಆಯ್ಕೆ ಬಗ್ಗೆ ಯೋಚನೆ ಬೇಡ. ನಿಮ್ಮಿಷ್ಟದ ಬಣ್ಣದ ಪ್ಯಾಂಟ್ ಖರಿದಿಸಿ. ಆಯ್ಕೆ ನಿಮ್ಮ ಬಣ್ಣಕ್ಕೆ ಪೂರಕವಾಗಿರಲಿ.

ಪ್ಯಾಂಟ್ ಬಣ್ಣಕ್ಕೆ ವಿರುದ್ಧ ಬಣ್ಣದ ಶರ್ಟ್ ಇದ್ದರೆ ಸ್ಟೈಲಿಶ್ ಲುಕ್ ಬರುತ್ತದೆ.

ಆ್ಯಂಕಲ್ ಲೆಂತ್‌ ಪ್ಯಾಂಟ್‌ಗಳ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಇವೆ. ಫ್ಲಿಪ್‌ಕಾರ್ಟ್‌ನಲ್ಲಿ ₹899 ಪ್ರಾರಂಭ.

ಯುವತಿಯರಿಗೂ ಲಭ್ಯ: ಆ್ಯಂಕಲ್ ಲೆಂತ್ ಪ್ಯಾಂಟ್‌ಗಳು ಯುವತಿಯರಿಗೂ ಲಭ್ಯವಿವೆ. ಹುಡುಗರಿಗಿಂತ ಹುಡುಗಿಯರಿಗೆ ಇದರಲ್ಲಿ ಹೆಚ್ಚಿನ ಆಯ್ಕೆಗಳು ಇವೆ.

**

‘ಫ್ಯಾಷನ್‌ ಯಾವಾಗಲೂ ಪುನರಾವರ್ತನೆಯಾಗುತ್ತದೆ ಏಂಬುದಕ್ಕೆ ‘ಆ್ಯಂಕಲ್ ಲೆಂತ್’ ಪ್ಯಾಂಟ್‌ಗಳು ಉತ್ತಮ ಉದಾಹರಣೆ. ಇದು ಜೆಂಡರ್ ಫ್ಲೆಕ್ಸಿಬಲ್ ಪ್ಯಾಂಟ್ (ಹುಡುಗ– ಹುಡುಗಿಯರಿಬ್ಬರಿಗೂ ಒಪ್ಪುವಂಥದ್ದು). ಜೀನ್ಸ್‌ ಸೇರಿದಂತೆ ಎಲ್ಲ ಮಾದರಿಯ ಬಟ್ಟೆಗಳಲ್ಲೂ ಆ್ಯಂಕಲ್‌ ಲೆಂತ್‌ ಪ್ಯಾಂಟ್‌ಗಳು ಲಭ್ಯ.
-ರಫೀಕ್‌, ಫ್ಯಾಷನ್ ಡಿಸೈನರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT