ಸೋಮವಾರ, ಡಿಸೆಂಬರ್ 16, 2019
18 °C

ಬೆರಳಿಗೊಂದು ಉಂಗುರ ಕೊಟ್ಟರೆ ಕಳೆದುಕೊಂಡಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆರಳಿಗೊಂದು ಉಂಗುರ ಕೊಟ್ಟರೆ ಕಳೆದುಕೊಂಡಳಾ

ಪ್ರವಾಸದ ಮೋಜುಮಸ್ತಿ ನಡುವೆ ನಿಶ್ಚಿತಾರ್ಥದ ಉಂಗುರ ಕಳೆದುಕೊಂಡರೆ ಹೇಗಿರುತ್ತದೆ? ಇಂಥದೊಂದು ಕಥೆ ಎಳೆ ಇಟ್ಟುಕೊಂಡು ನಿರ್ಮಿಸಿರುವ ಸಿನಿಮಾ ‘ಜಬ್ ಹ್ಯಾರಿ ಮೀಟ್ ಸೇಜಲ್’.

ಉಂಗುರ ಕಳೆದುಕೊಂಡ ಮದುಮಗಳ ಪಾತ್ರದಲ್ಲಿ ಅನುಷ್ಕಾ ಶರ್ಮಾ ಅಭಿನಯಿಸಿದ್ದರೆ, ಉಂಗುರ ಹುಡುಕಿಕೊಡಲು ಶಾರುಕ್ ಖಾನ್ ಜೊತೆಯಾಗಿದ್ದಾರೆ.

ಯುಟ್ಯೂಬ್‌ನ ರೆಡ್‌ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ಸಿನಿಮಾದ 2.30 ನಿಮಿಷದ ‘ರಿಂಗ್‌ ಕಹಾ ಹೈ’ ಎಂಬ ಮಿನಿ ಟ್ರೇಲರ್ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ವಿಡಿಯೊ 7.18 ಲಕ್ಷ ಬಾರಿ ವೀಕ್ಷಣೆಯಾಗಿದೆ.

ಅನುಷ್ಕಾ ಶರ್ಮಾ ಪಟಪಟನೆ ಮಾತನಾಡುತ್ತಾ,ಶಾರುಕ್‌ ತಲೆತಿನ್ನುವ ದೃಶ್ಯಗಳು ಲವಲವಿಕೆಯಿಂದ ಮೂಡಿಬಂದಿವೆ. ಈ ಹಿಂದೆ ಸಿನಿಮಾದ ‘ಬೀಚ್.. ಬೀಚ್‌.. ಹಾಡಿನ ಟ್ರೇಲರ್ ಹಾಗೇ ಅನುಷ್ಕಾ ಶರ್ಮಾ ಅವರ ‘ಸೇಜಲ್’ ಎಂಬ ಹೆಸರಿನ ಬಗ್ಗೆ 30 ಸೆಕೆಂಡ್ ಅವಧಿಯ ‘ಸೇಜಲ್ ಕಾ ಮತಲಬ್’ ಎಂಬ ಟ್ರೇಲರ್ ಬಿಡುಗಡೆಯಾಗಿ ಸುದ್ದಿ ಮಾಡಿತ್ತು.

ಜೊತೆಗೆ ಈ ಹಿಂದೆ ಕವಿ ರೂಮಿಯ ಪ್ರಖ್ಯಾತ ‘what you seek is seeking you’ ಸಾಲನ್ನು ಸಿನಿಮಾ ಪೋಸ್ಟರ್‌ನಲ್ಲಿ ಬರೆದು ಬಿಡುಗಡೆ ಮಾಡಿದ್ದರು.

 ಇಮ್ತಿಯಾಜ್ ಅಲಿ ‘ಜಬ್ ಹ್ಯಾರಿ ಮೀಟ್ ಸೇಜಲ್’ ಸಿನಿಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗೌರಿ ಖಾನ್ ಸಿನಿಮಾ ನಿರ್ಮಾಪಕಿ. ಸಿನಿಮಾ ಆಗಸ್ಟ್ 4ರಂದು ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)