ಶನಿವಾರ, ಡಿಸೆಂಬರ್ 7, 2019
25 °C

ಕ್ಯಾಟ್ ಫೋಟೊ ಶೂಟ್‌

Published:
Updated:
ಕ್ಯಾಟ್ ಫೋಟೊ ಶೂಟ್‌

ಸಲ್ಮಾನ್ ಖಾನ್ ನಟನೆಯ ‘ಟೈಗರ್ ಜಿಂದಾ ಹೈ’ ಸಿನಿಮಾಕ್ಕಾಗಿ ನಟಿ ಕತ್ರಿನಾ ಕೈಫ್ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಯುದ್ಧ ಗೆದ್ದು ಬಂದ ಭಾವದಲ್ಲಿರುವ ಈ ಫೋಟೊವನ್ನು ಕತ್ರಿನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಚ್ಚು ಕೂದಲಿನಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪ್ರಸಾದ್ ನಾಯ್ಕ ಕ್ಯಾಮೆರಾ ಕೈಚಳಕದಲ್ಲಿ ಕತ್ರಿನಾ ವಿಭಿನ್ನವಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

ಈ ಫೋಟೊಗೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಬಹು ದಿನಗಳ ಬಳಿಕ ಸಲ್ಮಾನ್ ಖಾನ್ ಜತೆ ಸಿನಿಮಾ ಮಾಡುತ್ತಿರುವ ಕತ್ರಿನಾ, ತಮ್ಮ ಮುಂದಿನ ಚಿತ್ರಗಳಾದ ‘ಜಗ್ಗಾ ಜಾಸೂಸ್‌’  ಪ್ರಚಾರ ಮತ್ತು ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)