ಶುಕ್ರವಾರ, ಡಿಸೆಂಬರ್ 6, 2019
18 °C

ಪುನೀತ್‌ಗೆ ಅಚ್ಚರಿ ನೀಡಿದ ‘ಸ್ಪೈಡರ್‌ಮ್ಯಾನ್‌’

Published:
Updated:
ಪುನೀತ್‌ಗೆ ಅಚ್ಚರಿ ನೀಡಿದ ‘ಸ್ಪೈಡರ್‌ಮ್ಯಾನ್‌’

‘ಪವರ್‌ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಮೊನ್ನೆ ‘ಅಂಜನಿಪುತ್ರ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಅಷ್ಟರಲ್ಲಿ ಮುಸುಕುಧಾರಿಯೊಬ್ಬ ಸಾಹಸ ದೃಶ್ಯಗಳನ್ನು ಮಾಡಿತೋರಿಸತೊಡಗಿದ.

ಪುನೀತ್‌, ನಿರ್ದೇಶಕ ಎ. ಹರ್ಷ ಸೇರಿದಂತೆ ಚಿತ್ರೀಕರಣ ತಂಡಕ್ಕೆ ಅಚ್ಚರಿಯೋ ಅಚ್ಚರಿ. ಹಾಗೆ ಸಾಹಸ ದೃಶ್ಯಗಳನ್ನು ಮಾಡಿತೋರಿಸಿದ್ದು ‘ಸ್ಪೈಡರ್‌ಮ್ಯಾನ್‌’!

ಪುನೀತ್‌ ಜತೆಗೆ ಛಾಯಾಚಿತ್ರಗಳಿಗೂ ಪೋಸ್‌ ಕೊಟ್ಟ ಸ್ಪೈಡರ್‌ಮ್ಯಾನ್‌ ಚಿತ್ರತಂಡದೊಂದಿಗೆ ಕೂಡಾ ಕಾಲ ಕಳೆದು ಹೊರಟರು.

ಪ್ರತಿಕ್ರಿಯಿಸಿ (+)