ಶನಿವಾರ, ಡಿಸೆಂಬರ್ 14, 2019
22 °C

ವರ್ಚುವಲ್‌ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಚುವಲ್‌ ಲೋಕ

ಎಲ್ಲೋ ನಡೆಯುತ್ತಿರುವ ದೃಶ್ಯ ಕಣ್ಣ ಮುಂದೆಯೇ ಬಂದುನಿಂತತೆ ಭಾಸವಾಗುವ ತಂತ್ರಜ್ಞಾನವೊಂದು ಆವಿಷ್ಕಾರವಾಗಿದೆ. ಅದುವೇ ವಿಆರ್ (ವರ್ಚ್ಯುಯಲ್ ರಿಯಾಲಿಟಿ) ತಂತ್ರಜ್ಞಾನ. ವಿಆರ್‌ ಹೆಡ್‌ ಧರಿಸಿದರೆ ಮೂರು ಮೀಟರ್‌ ದೂರದಲ್ಲಿ ಕುಳಿತಿರುವ ವ್ಯಕ್ತಿಯ ಚಲನವಲನಗಳು ತ್ರೀಡಿ ರೂಪದಲ್ಲಿ ಕಾಣಿಸುತ್ತದೆ.

ಜಪಾನ್‌ನ ಫ್ಯೂಚರ್ ಲೀಪ್ಸ್ ಎಂಬ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ಡೇಟಿಂಟ್ ವಿಆರ್ ಉಪಕರಣ ಧರಿಸಿದರೆ ಈ ಅನುಭವಗಳನ್ನು ಪಡೆಯಬಹುದು. 

ಇದು ಇನ್ನು ವಿಆರ್ ತಂತ್ರಜ್ಞಾನದ ಪ್ರಾರಂಭಿಕ ಹಂತವಷ್ಟೆ. ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ವಿಆರ್‌ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ಪ್ರದರ್ಶನದಲ್ಲಿ ಇದರ ಪ್ರಾತ್ಯಕ್ಷಿಕೆಯನ್ನು ನೀಡಲಾಗಿತ್ತು.

ಪ್ರದರ್ಶನದಲ್ಲಿ ಮೋಶನ್ ಸೆನ್ಸಾರ್‌ ಉತ್ಪನ್ನಗಳೂ ಸದ್ದು ಮಾಡಿದವು. ಲೈವ್ ಕಾರ್ಟೂನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶೊಹೆರಿ ಸುಜಿ ಮೈತುಂಬಾ ಮೋಶನ್ ಸೆನ್ಸರ್‌ ಉಡುಪು ಧರಿಸಿ ನರ್ತಿಸುತ್ತಿದ್ದರೆ ದೊಡ್ಡ ಪರದೆಯ ಮೇಲೆ ಅವರನ್ನೇ ಹೋಲುವ ಕಾರ್ಟೂನ್ ಪಾತ್ರ ಅವರ ನೃತ್ಯ ಅನುಕರಣೆ ಮಾಡುತ್ತಿತ್ತು.

ಇಂತಹ ಹಲವು ನವನವೀನ ತಂತ್ರಜ್ಞಾನ ಅಚ್ಚರಿಗಳಿಗೆ ವೇದಿಕೆಯಾಯ್ತು ಜಪಾನ್‌ನ ವಿಆರ್ ತಂತ್ರಜ್ಞಾನ ಪ್ರದರ್ಶನ ಮೇಳ.

ದೂರದ ಊರಿನಲ್ಲಿರುವ ಪ್ರಿಯತಮೆಯು ಸಮೀಪದಲ್ಲಿಯೇ ನಲಿಯುತ್ತಿರುವಂತೆ, ಆಕೆಯ ಪಿಸುನುಡಿಯ ಬಿಸಿಮಾತು ಕಿವಿಗೆ ಬೀಳುವಂತೆ ಮಾಡುವ ವಿಆರ್ ಸಾಧನವೊಂದು ಜನರ ಕುತೂಹಲ ಕೆರಳಿಸಿತ್ತು.

ಪ್ರತಿಕ್ರಿಯಿಸಿ (+)