ಶನಿವಾರ, ಡಿಸೆಂಬರ್ 7, 2019
16 °C

ಸೆಕ್ಸ್ ಅವರವರ ಆಯ್ಕೆ, ಆದರೆ ಋತುಚಕ್ರ ಅಲ್ಲ: ಸಾಮಾಜಿಕ ಜಾಲತಾಣಗಳಲ್ಲಿ ಮೋದಿಗೆ ಪಾಠ ಮಾಡಿದ ಮಹಿಳೆಯರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೆಕ್ಸ್ ಅವರವರ ಆಯ್ಕೆ, ಆದರೆ ಋತುಚಕ್ರ ಅಲ್ಲ: ಸಾಮಾಜಿಕ ಜಾಲತಾಣಗಳಲ್ಲಿ ಮೋದಿಗೆ ಪಾಠ ಮಾಡಿದ ಮಹಿಳೆಯರು

ಬೆಂಗಳೂರು: ಮಹಿಳೆಯರು ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ 12 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

‘ನನ್ನ ಋತುಚಕ್ರದ ಮೇಲೆ ತೆರಿಗೆ ವಿಧಿಸಬೇಡಿ’ ಎಂಬ ಅಡಿಬರಹದಲ್ಲಿ  ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದ್ದು, ಮಹಿಳೆಯರಿಗೆ ಅನ್ಯಾಯ ಮಾಡಬೇಡಿ. ಕುಂಕುಮ, ಬಳೆಗಳನ್ನು ತೆರಿಗೆ ಮುಕ್ತಗೊಳಿಸಿದ್ದೀರಿ. ಆದರೆ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ತೆರಿಗೆ ವಿಧಿಸಿರುವುದು ಯಾಕೆ ? ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.

‘ಲೈಂಗಿಕ ಕ್ರಿಯೆ ಅವರವರ ಆಯ್ಕೆ. ಆದರೆ ಋತುಚಕ್ರ ಅಲ್ಲ. ಕಾಂಡೋಮ್‌ ಅನ್ನು ತೆರಿಗೆ ಮುಕ್ತಗೊಳಿಸಿದ ಸರ್ಕಾರ ಪ್ಯಾಡ್‌ಗಳ ಮೇಲೆ ತೆರಿಗೆ ಹೇರಿರುವುದೇಕೆ?’ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಖ್ಯಾತ ಸ್ತ್ರೀರೋಗ ತಜ್ಞರಾದ ಪದ್ಮಿನಿ ಪ್ರಸಾದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇಂದಿಗೂ ಸಹ ಗ್ರಾಮೀಣ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಂಡುಕೊಳ್ಳುವುದಿಲ್ಲ. ನಾನು ಈ ಅಭಿಯಾನಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಇದರ ಬಗ್ಗೆ ಟ್ವೀಟ್ ಮಾಡಿದ ಮಹಿಳೆಯೊಬ್ಬರು, ‘ಜಿಎಸ್‌ಟಿ ಸಮಿತಿಯಲ್ಲಿ ಕೇವಲ ಪುರುಷರು ಮಾತ್ರ ಇದ್ದಾರೆಯೇ? ಪುರುಷರು ಋತುಚಕ್ರದ ಪ್ರಕ್ರಿಯೆಗೆ ಒಳಪಡುವುದಿಲ್ಲ’ ಎಂದು ಹೇಳಿದ್ದಾರೆ.

‘ದೇಶದಲ್ಲಿ ಶೇ 80ರಷ್ಟು ಮಹಿಳೆಯರಲ್ಲಿ ಸಮರ್ಪಕವಾಗಿ ಋತುಸ್ರಾವವಾಗುವುದಿಲ್ಲ. ಆದರೆ ಶೇ 12 ರಷ್ಟು ಜಿಎಸ್‌ಟಿಯನ್ನು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಹೇರಿದ್ದೀರಿ. ಸಿಂಧೂರ, ಬಳೆಗಳು ಜಿಎಸ್‌ಟಿ ಮುಕ್ತವಾಗಿವೆ. ಈ ರೀತಿ ಯಾಕೆ ಎಂದು ಕೇಳಬಹುದೇ ಅರುಣ್ ಜೇಟ್ಲಿ ಅವರೇ?’ ಎಂದು ಮತ್ತೊಬ್ಬ ಮಹಿಳೆ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)