ಸೋಮವಾರ, ಡಿಸೆಂಬರ್ 16, 2019
17 °C

ಜೂನಿಯರ್ ರಾಷ್ಟ್ರೀಯ ಈಜು: ರಾಜ್ಯದ ಪಟುಗಳ ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನಿಯರ್ ರಾಷ್ಟ್ರೀಯ ಈಜು: ರಾಜ್ಯದ ಪಟುಗಳ ಪಾರಮ್ಯ

ಪುಣೆ: ಎರಡನೇ ದಿನವೂ ಮಿಂಚು ಹರಿಸಿದ ಶ್ರೀಹರಿ ಅವರ ಅಪೂರ್ವ ಸಾಮರ್ಥ್ಯದ ಬಲದಿಂದ ಕರ್ನಾಟಕ 44ನೇ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಚಾಂಪಿಯನ್‌ಷಿಪ್‌ನ ಎರಡನೇ ದಿನದ ಸ್ಪರ್ಧೆಗಳು ಮುಕ್ತಾಯ ಗೊಂಡಾಗ ರಾಜ್ಯ ತಲಾ 13 ಚಿನ್ನ ಮತ್ತು ಬೆಳ್ಳಿ, 10 ಕಂಚಿನ ಪದಕಗಳನ್ನು ಬಗಲಿಗೆ ಹಾಕಿಕೊಂಡಿದ್ದು ಆತಿಥೇಯ ಮಹಾರಾಷ್ಟ್ರದ ಬಳಿ 12 ಚಿನ್ನ, ಏಳು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳಿವೆ.

ಮೊದಲ ದಿನ ಬಾಲಕರ 50 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ನೂತನ ದಾಖಲೆ ಬರೆದ ಶ್ರೀಹರಿ ಎರಡನೇ ದಿನವಾದ ಮಂಗಳವಾರ 200 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ನೂತನ ಕೂಟ ದಾಖಲೆ ಬರೆದರು. ಕರ್ನಾಟಕದವರೇ ಆದ ಅರವಿಂದ ಮಣಿ 2013ರಲ್ಲಿ ನಿರ್ಮಿಸಿದ ದಾಖಲೆಯನ್ನು ಅವರು ಅಳಿಸಿ ಹಾಕಿದರು.

ಫಲಿತಾಂಶಗಳು

ಬಾಲಕರು, ಗುಂಪು–1: 200 ಮೀ ಫ್ರೀಸ್ಟೈಲ್‌: ರಾಹುಲ್‌ ಎಂ (ಕರ್ನಾಟಕ)–1, ಕುಶಾಗ್ರ ರಾವತ್‌ (ದೆಹಲಿ)–2, ಆರೋನ್ ಫರ್ನಾಂಡಿಸ್ (ಮಹಾರಾಷ್ಟ್ರ)3; 200 ಮೀ ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್ (ಕರ್ನಾಟಕ)–1, ಅದ್ವೈತ್ ಪಾಗೆ (ಮಧ್ಯಪ್ರದೇಶ)–2, ಕ್ಷೇವಿಯರ್ ಡಿಸೋಜ (ಗೋವ)–3; 100 ಮೀ ಬ್ರೆಸ್ಟ್‌ ಸ್ಟ್ರೋಕ್‌: ಧನುಷ್ ಎಸ್‌ (ತಮಿಳುನಾಡು)–1, ಮಿಲ್ಟನ್ ದತ್ತಾ (ಅಸ್ಸೋಂ)–2, ಮಾನವ್‌ ದಿಲೀಪ್‌ (ಕರ್ನಾಟಕ)–3, 200 ಮೀ. ವೈಯಕ್ತಿಕ ಮಿಡ್ಲೆ: ನೀಲ್ ರಾಯ್‌ (ಮಹಾರಾಷ್ಟ್ರ)–1, ವೇದಾಂತ್‌ ಕಂದೀಪ್‌ಕರ್‌ (ಮಹಾರಾಷ್ಟ್ರ)–2, ಶಿವ ಎಸ್‌ (ಕರ್ನಾಟಕ)–3; 4x100 ಮೀ ರಿಲೇ: ಕರ್ನಾಟಕ–1, ಮಹಾರಾಷ್ಟ್ರ–2, ತಮಿಳುನಾಡು–3.

ಪ್ರತಿಕ್ರಿಯಿಸಿ (+)