ಶುಕ್ರವಾರ, ಡಿಸೆಂಬರ್ 6, 2019
17 °C

ಏಷ್ಯಾ ಸ್ನೂಕರ್‌: ಫೈನಲ್‌ಗೆ ಭಾರತ ‘ಎ’

Published:
Updated:
ಏಷ್ಯಾ ಸ್ನೂಕರ್‌: ಫೈನಲ್‌ಗೆ ಭಾರತ ‘ಎ’

ಬಿಸಕೆಕ್, ಕಿರ್ಗಿಸ್ತಾನ: ಪಂಕಜ್ ಅಡ್ವಾಣಿ ಮತ್ತು ಲಕ್ಷ್ಮಣ್ ರಾವತ್ ಅವರ ಅಮೋಘ ಆಟದ ನೆರವಿನಿಂದ ಭಾರತ ‘ಎ’ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ತಂಡ ಸ್ನೂಕರ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಇರಾನ್‌ ‘ಎ’ ಎದುರು 3–1ರ ಗೆಲುವು ಸಾಧಿಸಿತು. ಸೆಮಿಫೈನಲ್‌ನಲ್ಲಿ ಥಾಯ್ಲೆಂ ಡ್‌ ಎದುರು 3–0 ಅಂತರದ ಜಯ ಸಾಧಿಸಿತು.

‘ಇಲ್ಲಿ ಅತ್ಯಮೋಘವಾದ ಆಟ ಆಡಿದ್ದೇವೆ. ಫೈನಲ್‌ಗೆ ಪ್ರವೇಶಿಸಿ ರುವುದು ಖುಷಿಯ ಸಂಗತಿ. ಫೈನಲ್‌ನಲ್ಲಿ ಇನ್ನಷ್ಟು ಸಮರ್ಥವಾಗಿ ಆಡುತ್ತೇವೆ’ ಎಂದು ಕರ್ನಾಟಕದ ಪಂಕಜ್ ಅಡ್ವಾಣಿ ಸೆಮಿಫೈನಲ್‌  ನಂತರ ಹೇಳಿದರು.

ಫಲಿತಾಂಶಗಳು: ಕ್ವಾರ್ಟರ್‌ಫೈನಲ್‌: ಭಾರತ ‘ಎ’ ತಂಡಕ್ಕೆ ಇರಾನ್‌ ‘ಎ’ ವಿರುದ್ಧ 3–1ರಿಂದ ಗೆಲುವು (ಜರೇಹ್‌ ದೂಸ್ತ್‌ ವಿರುದ್ಧ ಪಂಕ ಜ್ ಅಡ್ವಾಣಿಗೆ 66–42ರಿಂದ ಜಯ; ಸರ್ಕೋಶ್‌ ವಿರುದ್ಧ ಲಕ್ಷ್ಮಣ್‌ ರಾವತ್‌ಗೆ 18–98ರಿಂದ ಸೋಲು; ಅಡ್ವಾಣಿ–ರಾವತ್ ಜೋಡಿಗೆ ಜರೇಹ್‌ ದೂಸ್ತ್‌–ಸರ್ಕೋಶ್‌ ವಿರುದ್ಧ 64–37 ರಿಂದ ಜಯ; ಅಡ್ವಾಣಿಗೆ ಸರ್ಕೋಶ್‌ ವಿರುದ್ಧ 76–6ರಿಂದ ಜಯ).

ಸೆಮಿಫೈನಲ್‌: ಭಾರತ ‘ಎ’ಗೆ ಥಾಯ್ಲೆಂಡ್‌ ‘ಎ’ವಿರುದ್ಧ 3–0 ಅಂತರದ ಗೆಲುವು (ಅಡ್ವಾಣಿಗೆ ಫೊನ್ಬುನ್‌ ವಿರುದ್ಧ 92 –0ಯಿಂದ ಜಯ; ರಾವತ್‌ಗೆ ಕಚೈ ವಾಂಗ್‌ ವಿರುದ್ಧ 70–8ರಿಂದ ಜಯ; ಅಡ್ವಾಣಿ–ರಾವತ್‌ ಜೋಡಿಗೆ ಫೊನ್ಬುನ್‌–ಕಚೈವಾಂಗ್‌ ವಿರುದ್ಧ 62–22ರಿಂದ ಜಯ).

ಪ್ರತಿಕ್ರಿಯಿಸಿ (+)