ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ ವಾಡಿಕೆ ಮಳೆ ಶೇ 20ರಷ್ಟು ಕೊರತೆ

Last Updated 5 ಜುಲೈ 2017, 7:32 IST
ಅಕ್ಷರ ಗಾತ್ರ

ಬೆಳಗಾವಿ: ಮುಂಗಾರು ಆರಂಭದ ಜೂನ್‌ ತಿಂಗಳಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆ ಆಗಿದ್ದು, ರೈತರಲ್ಲಿ ಸಣ್ಣದಾಗಿ ಆತಂಕ ಶುರುವಾಗಿದೆ. ವಾಡಿಕೆಯಂತೆ 126.7 ಸೆಂಟಿ ಮೀಟರ್‌ ಸುರಿಯಬೇಕಾಗಿದ್ದ ಮಳೆ 103.1 ಸೆಂಟಿ ಮೀಟರ್‌ ಮಳೆ ಆಗಿದೆ. ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿ ಹಾಗೂ ಖಾನಾಪುರದಲ್ಲಿ ಮಳೆ ಇಳಿಮುಖವಾಗಿರುವುದು ರೈತರ ಆತಂಕ ಇನ್ನಷ್ಟು ಹೆಚ್ಚಿಸಿದೆ.

ಜಿಲ್ಲೆಯ ಎಲ್ಲ 10 ತಾಲ್ಲೂಕುಗಳ ಪೈಕಿ ನಾಲ್ಕು ತಾಲ್ಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿರು ವುದು ಸ್ವಲ್ಪ ಮಟ್ಟಿನ ಆಶಾಭಾವನೆ ಮೂಡಿದೆ. ಅಥಣಿ, ಬೈಲಹೊಂಗಲ, ಹುಕ್ಕೇರಿ, ರಾಮದುರ್ಗದಲ್ಲಿ ಉತ್ತಮ ಮಳೆಯಾಗಿದೆ. ಅಥಣಿಯಲ್ಲಿ 12.1 ಸೆಂಟಿ ಮೀಟರ್‌, ಬೈಲಹೊಂಗಲದಲ್ಲಿ 9.7 ಸೆಂಟಿ ಮೀಟರ್‌, ಹುಕ್ಕೇರಿಯಲ್ಲಿ 10.6 ಸೆಂಟಿ ಮೀಟರ್‌ ಹಾಗೂ ರಾಮದುರ್ಗದಲ್ಲಿ 8.1 ಸೆಂಟಿ ಮೀಟರ್‌ ಮಳೆಯಾಗಿದೆ.

ಜಿಲ್ಲೆಯ ಕೇಂದ್ರ ಸ್ಥಾನವಾದ ಬೆಳ ಗಾವಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮಳೆ ಕಡಿಮೆಯಾಗಿದೆ. ವಾಡಿಕೆಯಂತೆ 24.0 ಸೆಂಟಿ ಮೀಟರ್‌ ಮಳೆಯಾಗಬೇಕಾಗಿತ್ತು. ಆದರೆ, ಮಳೆ ಸುರಿದಿರುವುದು ಕೇವಲ 11.2 ಸೆಂಟಿ ಮೀಟರ್‌. ಇಷ್ಟೊಂದು ಪ್ರಮಾಣದಲ್ಲಿ ಮಳೆ ಇಳಿಮುಖವಾಗಿರು ವುದು ಭತ್ತ ಬೆಳೆಯುವ ರೈತರಲ್ಲಿ ಭಯ ಮೂಡಿಸಿದೆ.

ಚಿಕ್ಕೋಡಿಯಲ್ಲಿ 7.4 ಸೆಂ.ಮೀ ಮಳೆ ಆಗಿದ್ದು, ಶೇ 13ರಷ್ಟು ಕಡಿಮೆಯಾಗಿದೆ. ಗೋಕಾಕದಲ್ಲಿ 5.37 ಸೆಂಟಿ ಮೀಟರ್‌ ಮಳೆಯಾಗಿದೆ. ಶೇ 22.2 ರಷ್ಟು ಇಳಿ ಮುಖವಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಖಾನಾಪುರದಲ್ಲಿ 29.9 ಸೆಂಟಿ ಮೀಟರ್‌ ಮಳೆಯಾಗಿದೆ. ವಾಡಿಕೆ ಮಳೆಗಿಂತ ಶೇ 20ರಷ್ಟು ಕಡಿಮೆಯಾಗಿದೆ.

ರಾಯಬಾಗದಲ್ಲಿ 6.0 ಸೆಂ.ಮೀ ಮಳೆಯಾಗಿದೆ. ಶೇ 16.5ರಷ್ಟು ಕೊರತೆ ಉಂಟಾಗಿದೆ. ಅತಿ ಹೆಚ್ಚು ಸವದತ್ತಿಯಲ್ಲಿ ಮಳೆ ಕೊರತೆ ಉಂಟಾಗಿದೆ. 2.4 ಸೆಂಟಿ ಮೀಟರ್‌ ಮಳೆಯಾಗಿದ್ದು, ಶೇ 71ರಷ್ಟು ಕೊರತೆ ಅನುಭವಿಸಿದೆ. 

ನಿಧಾನಗತಿಯ ನದಿ ಹರಿವು: ಮಳೆ ಇಳಿ ಮುಖವಾಗಿರುವುದರಿಂದ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ದೂಧಗಂಗಾ, ವೇದಗಂಗಾ ನೀರಿನ ಹರಿವು ಕಡಿಮೆ ಇದೆ. ಈಗಷ್ಟೇ ನಿಧಾನವಾಗಿ ನೀರಿನ ಹರಿವು ಏರಿಕೆ ಕಾಣುತ್ತಿದೆ. ನೆರೆಯ ಮಹಾರಾಷ್ಟ್ರದಿಂದ ನೀರು ಹರಿಬಿಡು ತ್ತಿರುವುದರಿಂದ ಕೃಷ್ಣಾ ನದಿಗೆ ತಕ್ಕ ಮಟ್ಟಿನ ನೀರು ಬರುತ್ತಿದೆ. ನದಿ ಅಕ್ಕ ಪಕ್ಕದ ಹೊಲಗಳ ರೈತರಿಗೆ ಕೊಂಚ ಆಶಾಭಾವನೆ ಮೂಡಿಸಿದೆ.

ಕೃಷಿ ಚಟುವಟಿಕೆ: ಮಲೆನಾಡಿನ ವ್ಯಾಪ್ತಿ ಯೊಳಗೆ ಬರುವ ಬೆಳಗಾವಿ ಹಾಗೂ ಖಾನಾಪುರದಲ್ಲಿ ಮಳೆ ಕಡಿಮೆಯಾಗಿ ರುವುದರಿಂದ ಭತ್ತ ಬಿತ್ತನೆಯು ಕುಂಠಿತ ವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ ಕೇವಲ ಶೇ 30ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ 65ರಿಂದ 70ರಷ್ಟು ಬಿತ್ತನೆ ಆಗಿತ್ತು ಎಂದು ಕೃಷಿ ಜಂಟಿ ನಿರ್ದೇಶಕ ವೆಂಕಟರಾಮರೆಡ್ಡಿ ಅವರು ಮಾಹಿತಿ ನೀಡಿದರು.

ಭತ್ತ ಹಾಗೂ ಹೆಸರನ್ನು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಇನ್ನು ಳಿದಂತೆ ಉದ್ದು, ತೊಗರಿ, ಸೋಯಾ, ಸೂರ್ಯಕಾಂತಿ, ಶೇಂಗಾ, ಹತ್ತಿಯನ್ನು ಅಲ್ಲಲ್ಲಿ ಬಿತ್ತಿದ್ದಾರೆ. ಇನ್ನುಳಿದ ರೈತರು, ಭೂಮಿಯನ್ನು ಹದ ಮಾಡಿಕೊಂಡು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಾದರೂ ಮಳೆ ಆಗಲಿ ಎನ್ನುವ ಆಶಾಭಾವನೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT