ಶುಕ್ರವಾರ, ಡಿಸೆಂಬರ್ 6, 2019
17 °C

ಆಸ್ತಿಗಾಗಿ ತಾಯಿ ಹಾಗೂ ತಮ್ಮನಿಂದಲೇ ಯುವಕನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ತಿಗಾಗಿ ತಾಯಿ ಹಾಗೂ ತಮ್ಮನಿಂದಲೇ ಯುವಕನ ಹತ್ಯೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಜೂನ್ 29 ರಂದು ನಡೆದಿದ್ದ ಯುವಕನ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೇವಿಕೊಪ್ಪ ಗ್ರಾಮದ ಈಚನಹಳ್ಳಿ ಕ್ರಾಸ್ ಬಳಿ ಚೆನ್ನಪ್ಪ ಹೊಸಮನಿ (28) ಎಂಬುವರ ಕೊಲೆಯಾಗಿತ್ತು. ತಾಯಿ ಮಲ್ಲವ್ವ ಹೊಸಮನಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೆತ್ತ ತಾಯಿಯೇ ತನ್ನ ಕಿರಿ ಮಗ ಹಾಗೂ ಇಬ್ಬರು ಸುಪಾರಿ ಹಂತಕರ ಜೊತೆ ಸೇರಿ ಮಗನನ್ನು ಕೊಲೆ ಮಾಡಿದ್ದ ಸಂಗತಿ ತನಿಖೆಯಿಂದ ಹೊರಬಂದಿದೆ.

ಕೊಲೆಯಲ್ಲಿ ಭಾಗಿಯಾದ ತಾಯಿ ಮಲ್ಲವ್ವ ಹೊಸಮನಿ (50), ಕಿರಿಯ ಮಗ ಬಸವರಾಜ ಹೊಸಮನಿ (25), ಸುಪಾರಿ ಹಂತಕರಾದ ಗಲಗಿನಕಟ್ಟಿ ಗ್ರಾಮದ ನಾಗಯ್ಯ ಹಿರೇಮಠ (30), ಬೆಂಡಲಗಟ್ಟಿ ಗ್ರಾಮದ ಚನ್ನಬಸಪ್ಪ ಹಿರೇಮಠ (37) ಅವರುಗಳನ್ನು ಬಂಧಿಸಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಸುತ್ತಿಗೆ, ಕಬ್ಬಿಣದ ರಾಡು, ಬೈಕ್ ಜಪ್ತಿ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)