ಸೋಮವಾರ, ಡಿಸೆಂಬರ್ 16, 2019
25 °C

₹ 500ಕ್ಕೆ ರಿಲಯನ್ಸ್‌ ಜಿಯೋ 4G ಹ್ಯಾಂಡ್‌ಸೆಟ್‌?

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

₹ 500ಕ್ಕೆ ರಿಲಯನ್ಸ್‌ ಜಿಯೋ 4G ಹ್ಯಾಂಡ್‌ಸೆಟ್‌?

ನವದೆಹಲಿ: ದೇಶದ ಟೆಲಿಕಾಂ ನೆಟ್‌ವರ್ಕ್‌ ಕ್ಷೇತ್ರದಲ್ಲಿ ರಿಲಯನ್ಸ್‌ 'ಜಿಯೋ' ದರ ಸಮರದಲ್ಲಿ ಹೊಸ ಅಲೆಯನ್ನೆ ಎಬ್ಬಿಸಿತ್ತು. ಇದೀಗ ₹500ಕ್ಕೆ ಜಿಯೋ 4G VoLTE ಹ್ಯಾಂಡ್‌ಸೆಟ್‌ ಪರಿಚಯಿಸುವ ಮೂಲಕ ಮತ್ತೊಂದು ದರ ಸಮರಕ್ಕೆ ರಿಲಯನ್ಸ್‌ ನಾಂದಿ ಹಾಡಲಿದೆ.

ಇದೇ ತಿಂಗಳಲ್ಲಿ ಜಿಯೋ ಹೊಸ ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ  ಎಂದು ದಿ ಇಕಾನಿಮಿಕ್ಸ್‌ ಟೈಮ್ಸ್‌ ವರದಿ ಮಾಡಿದೆ.

‘ರಿಲಯನ್ಸ್‌  4G VoLTE ಹ್ಯಾಂಡ್‌ಸೆಟ್‌ ಅನ್ನು ಕೇವಲ ₹500 ಗೆ ಮಾರುಕಟ್ಟೆಗೆ ಪರಿಚಯಿಸುವ ಮೂಲಕ 2ಜಿ ಬಳಕೆದಾರರನ್ನು ನೇರವಾಗಿ 4ಜಿ ಕಡೆಗೆ ಆಕರ್ಷಿಸಿಸಲಿದೆ’ ಎಂದು ವಿಶ್ಲೇಷಿಸಲಾಗಿದೆ.

ಜುಲೈ 21ರಂದು ನಡೆಯಲಿರುವ ರಿಲಯನ್ಸ್‌ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಜಿಯೋ ದರದಲ್ಲಿ ಕೊಡುಗೆ ಹಾಗೂ ಜಿಯೋ ಹ್ಯಾಂಡ್‌ಸೆಟ್‌ ಕುರಿತ ಪ್ರಕಟಣೆ ಹೊರಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪರಿಚಯಿಸುತ್ತಿರುವ ಹೊಸ ಹ್ಯಾಂಡ್‌ಸೆಟ್‌ಗೆ ತಗುಲುವ ವೆಚ್ಚದಲ್ಲಿ  ₹650–₹975 (10–15 ಡಾಲರ್‌) ಮೊತ್ತವನ್ನು ರಿಲಯನ್ಸ್‌ ಸಂಸ್ಥೆಯೇ ಭರಿಸಲಿದೆ ಎಂದು ಎಚ್‌ಎಸ್‌ಬಿಸಿಯ ನಿರ್ದೇಶಕ ಹಾಗೂ ದೂರ ಸಂಪರ್ಕ ವಿಶ್ಲೇಷಕರಾದ ರಾಜೀವ್‌ ಶರ್ಮಾ ತಿಳಿಸಿದ್ದಾರೆ.

ಈ ವರ್ಷದ ಏಪ್ರಿಲ್‌ 11ರಿಂದ ಪ್ರಕಟಿಸಲಾಗಿದ ರಿಲಯನ್ಸ್‌ ಜಿಯೋದ ಮೂರು ತಿಂಗಳ ಅನಿಯಮಿತ ಶುಲ್ಕರಹಿತ ದೂರವಾಣಿ ಕರೆ ಹಾಗೂ ಡಾಟಾ ಕೊಡುಗೆ(ಧನ್‌ ಧನಾ ಧನ್‌) ಜುಲೈ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಜತೆಗೆ ಈ ಕೊಡುಗೆಗೆ ಪಯಾರ್ಯವಾಗಿ ಮತ್ತೊಂದು ಹೊಸ ಯೋಜನೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)