ಸೋಮವಾರ, ಡಿಸೆಂಬರ್ 16, 2019
17 °C

ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಕಲಬುರ್ಗಿ: ಮೂವರು ದುಷ್ಕರ್ಮಿಗಳು ಯುವಕನೊಬ್ಬನನ್ನು ಅಪಹರಿಸಿ, ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ.

ಕೊಲೆ ಯತ್ನದಿಂದ ಯುವಕ ಪಾರಾಗಿದ್ದು, ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಜ್ ಪ್ರದೇಶದ ಶೇಖ್ ಮಹಮ್ಮದ್ ಅಬ್ದುಲ್ ಹಮೀದ್ ಅಪಹರಣಕ್ಕೆ ಒಳಗಾದ ಯುವಕ. ಈತ ಸಾಮಿಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ.

ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಮೂವರು ಯುವಕರು ಈತನನ್ನು ತಮ್ಮ ಬೈಕ್ ಮೇಲೆ ಕರೆದೊಯ್ದಿದ್ದಾರೆ. ಇಲ್ಲಿನ ಹಾಗರಗಾ ರಸ್ತೆಯ ಇನಾಮದಾರ ಕಾಲೇಜು ಬಳಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ.

ಯುವಕ ಚೀರಲು ಆರಂಭಿಸಿದಾಗ ಜನ ಸೇರುವುದನ್ನು ಅರಿತ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ವಿಶ್ವವಿದ್ಯಾಲಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿಕ್ರಿಯಿಸಿ (+)