ಭಾನುವಾರ, ಡಿಸೆಂಬರ್ 8, 2019
24 °C

ಏನ್ ಗುರು ಸಮಾಚಾರ

Published:
Updated:
ಏನ್ ಗುರು ಸಮಾಚಾರ

ನೋಡಿ ನಮ್‌ ಫ್ಯಾಷನ್‌...

ಪ್ಯಾರಿಸ್‌ನಲ್ಲಿ ನಡೆದ ಫ್ಯಾಷನ್‌ ಷೋನಲ್ಲಿ ಮಾಡೆಲ್‌ವೊಬ್ಬಳು ಹೊಸ ವಿನ್ಯಾಸದ ವಸ್ತ್ರ ತೊಟ್ಟು ಹೆಜ್ಜೆ ಹಾಕುವಾಗ ಫ್ಯಾಷನ್‌ ಪ್ರಿಯರ ಕಣ್ಣುಗಳೆಲ್ಲ ರ್‍ಯಾಂಪ್ ಮೇಲೇ ನೆಟ್ಟಿದ್ದವಂತೆ. ಷೋನಲ್ಲಿ ಈ ಮಾಡೆಲ್‌ ಮೆರೆದರೆ, ಬಳಿಕ ವಸ್ತ್ರ ವಿನ್ಯಾಸಕ ಗಾಲಿಯಾ ಲಹಾವ್‌ ಸಿಕ್ಕಾಪಟ್ಟೆ ಬೇಡಿಕೆ ಗಿಟ್ಟಿಸಿದರಂತೆ!

**

ಕುರೂಪ ಸ್ಪರ್ಧೆ!

ಅತ್ತ ಪ್ಯಾರಿಸ್‌ನಲ್ಲಿ ಫ್ಯಾಷನ್‌ ಷೋ ನಡೆದಿರುವಾಗಲೇ ಇತ್ತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ‘ಪ್ರಪಂಚದ ಅತ್ಯಂತ ಕುರೂಪಿ ನಾಯಿಗಳ ಸ್ಪರ್ಧೆ’ ನಡೆಯಿತು. ಜಗತ್ತಿನ ವಿವಿಧ ದೇಶಗಳಿಂದ ಬಂದಿದ್ದ ನಾಯಿಗಳೆಲ್ಲ ಕುರೂಪದಲ್ಲಿ ‘ನಾ ಮುಂದು, ತಾ ಮುಂದು’ ಎಂದೆಲ್ಲ ಪೈಪೋಟಿಗೆ ಇಳಿದಿದ್ದವು.

ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ‘ಚೇಸ್‌’ ಎಂಬ ಹೆಸರಿನ ಈ ಚೀನಾ ನಾಯಿ ಹಣೆ ಮೇಲೆ, ಮೂಗಿನ ಮೇಲೆ, ಕಪಾಳದ ಮೇಲೆ ಎಲ್ಲೆಂದರಲ್ಲಿ ಬೆಳೆದಿದ್ದ ಬಿಳಿ ಕೂದಲನ್ನು ಗತ್ತಿನಿಂದ ತೋರಿಸುತ್ತಾ ನನ್ನಷ್ಟು ಕುರೂಪ ಯಾರಿದ್ದಾರೆ ಎಂದು ಪ್ರಶ್ನಿಸುತ್ತಿತ್ತು. ಆದರೆ, ಮೊದಲ ಪ್ರಶಸ್ತಿ ಇನ್ಯಾವುದೋ ಬೇರೆ ನಾಯಿಗೆ ಹೋಯಿತು!

**

ಹೇಗಿದೆ ಪಟ್ಟು?

ಗುವಾಹಟಿಯಲ್ಲಿ ಕಳೆದ ವಾರ ಕಥಕ್‌ ನೃತ್ಯ ತರಬೇತಿ ಶಿಬಿರ ನಡೆಯಿತು. ಕಥಕ್‌ ಪಟು ಪಂಡಿತ್‌ ಬಿರ್ಜು ಮಹಾರಾಜ್‌ ಅವರು ನೃತ್ಯದ ಪಟ್ಟುಗಳನ್ನು ಹೇಳಿಕೊಟ್ಟರಾ? ಹಿರಿಯ ಕಲಾವಿದನನ್ನು ಅನುಸರಿಸಿದ ಮಕ್ಕಳು ನೋಡುಗರಿಗೆ ಕಚಗುಳಿ ಇಟ್ಟರು.

ಪ್ರತಿಕ್ರಿಯಿಸಿ (+)