ಸೋಮವಾರ, ಡಿಸೆಂಬರ್ 16, 2019
26 °C

ಹೀಲ್ಸ್ ತೊಟ್ಟು ಓಡಿದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀಲ್ಸ್ ತೊಟ್ಟು ಓಡಿದರು...

ಬರಿ ಹುಡುಗಿಯರಷ್ಟೇ ಅಲ್ಲ, ನಾವೇನು ಕಮ್ಮಿ ಎಂದು ಉದ್ದುದ್ದದ ಹೀಲ್ಸ್ ತೊಟ್ಟು ಓಡಿದರು ಈ ಪುರುಷರು. ಪ್ರತಿವರ್ಷ ಸ್ಪೇನ್‌ನಲ್ಲಿ ನಡೆಯುವ ವರ್ಲ್ಡ್‌ ಪ್ರೈಡ್‌ ಮ್ಯಾಡ್ರಿಡ್ ಫೆಸ್ಟಿವಲ್‌ನಲ್ಲಿ ಈ ಬಾರಿ ಪುರುಷರು ಹೀಲ್ಸ್ ತೊಟ್ಟಿದ್ದೇ ಸುದ್ದಿ. ಉತ್ಸವದ ಭಾಗವಾಗಿ ಗೇ ಪ್ರೈಡ್ ಫೆಸ್ಟಿವಲ್ ನಡೆಯುತ್ತದೆ. ಅದರಲ್ಲಿ ಪುರುಷರಿಗೆಂದೇ ಈ ವಿಶೇಷ ಸ್ಪರ್ಧೆ ನಡೆದಿತ್ತು.

ಚೂಪಾದ ಅಂಚುಳ್ಳ ಸ್ಟಿಲೆಟೊ ಹೀಲ್ಡ್, ಸ್ವಲ್ಪ ಸಪಾಟಿನಂತೆ ಕಾಣುವ ಕಿಟೆನ್ ಹೀಲ್ಸ್, ಅಡ್ಡಡ್ಡ ಇರುವ ವೆಡ್ಜ್‌ ಹೀಲ್‌ಗಳನ್ನು ತೊಟ್ಟು ಪುರುಷರು ಹುಮ್ಮಸ್ಸಿನಿಂದಲೇ ಓಡಿದರು. ಹೀಲ್ಸ್ 10 ಸೆಂ.ಮೀ ಅಂದರೆ ನಾಲ್ಕು ಇಂಚು ಇರಬೇಕು ಎಂಬುದು ಸ್ಪರ್ಧೆಯ ನಿಯಮವಾಗಿತ್ತು. ಅವುಗಳನ್ನು ಅಳತೆ ಮಾಡಿಯೇ ರೇಸ್‌ಗೆ ಬಿಡಲಾಯಿತು. ನೂರು ಮೀಟರ್‌ ಓಡಿ ಕೊನೆಗೂ ಒಂದಷ್ಟು ಪುರುಷರು ಗೆದ್ದೇ ಬಿಟ್ಟರಂತೆ.

ಪ್ರತಿಕ್ರಿಯಿಸಿ (+)