ಭಾನುವಾರ, ಡಿಸೆಂಬರ್ 8, 2019
21 °C

ಪಿಗ್ಗಿಯ ತುಟಿ ದಪ್ಪವಾದ ಕತೆ

Published:
Updated:
ಪಿಗ್ಗಿಯ ತುಟಿ ದಪ್ಪವಾದ ಕತೆ

ನಿತ್ಯವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಈಗ ತಮ್ಮ ದಪ್ಪತುಟಿಯ ಚಿತ್ರದ ಮೂಲಕ ಸುದ್ದಿಯಾಗಿದ್ದಾರೆ.

ಮೇಲಿನ ತುಟಿಯನ್ನು ಮುಂದೆ ಮಾಡಿಕೊಂಡು ಪೋಸ್ ಕೊಟ್ಟಿರುವ ಸೆಲ್ಫಿಯನ್ನು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಐದು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಒತ್ತಿದ್ದು, 2,856 ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.


 

Summer lovin... #carfiesunday

A post shared by Priyanka Chopra (@priyankachopra) on


'ಪ್ರಿಯಾಂಕಾ ನಿಮ್ಮ ತುಟಿಯನ್ನು ಎಷ್ಟು ದೊಡ್ಡದು ಮಾಡಿಕೊಳ್ಳುತ್ತೀರಿ? ಲಿಪ್‌ಸ್ಟಿಕ್ ಹಚ್ಚಿಕೊಂಡು ವಾಲ್‌ಗೆ ಮುತ್ತಿಟ್ಟರೆ ಇಡೀ ವಾಲ್‌ ರಂಗುರಂಗಾಗುತ್ತದೆ' ಎಂದು ಒಬ್ಬ ಅಭಿಮಾನಿ ಪ್ರತಿಕ್ರಿಯಿಸಿದರೆ, ಮತ್ತೊಬ್ಬ ತುಟಿ ದಪ್ಪ ಮಾಡಿಸಿಕೊಂಡು ವಿಶ್ವ ದಾಖಲೆ ಮಾಡಬೇಕೆಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾನೆ.

ನಿಮ್ಮ ತುಟಿ ಮೀನಿನ ತುಟಿಗಳಂತಿವೆ, ತುಂಬಾ ತಮಾಷೆಯಾಗಿವೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕಾ ಸುಮ್ಮನಿದ್ದರೂ, ಕುಳಿತರೂ, ನಿಂತರೂ, ತುಟಿ ಸ್ವಲ್ಪ ಸೊಟ್ಟಗೆ ಮಾಡಿದರೂ ಸುದ್ದಿಯಾಗುತ್ತಿದ್ದಾರೆ!

ಪ್ರತಿಕ್ರಿಯಿಸಿ (+)