ಮಂಗಳವಾರ, ಡಿಸೆಂಬರ್ 10, 2019
17 °C

ಸರಳ ಸುಂದರಿ ಸುಷ್ಮಿತಾ

Published:
Updated:
ಸರಳ ಸುಂದರಿ ಸುಷ್ಮಿತಾ

ಒಂದೆಡೆ ತುಟಿ ದಪ್ಪ ಮಾಡಿಕೊಂಡು ಲಿಪ್‌ಸ್ಟಿಕ್ ಹಚ್ಚಿಕೊಂಡು ಪ್ರಿಯಾಂಕಾ ಚೋಪ್ರಾ ಸುದ್ದಿಯಾದರೆ, ಮತ್ತೊಂದೆಡೆ ವಿಶ್ವಸುಂದರಿ ಸುಷ್ಮಿತಾ ಸೇನ್ ಮೇಕಪ್ ಇಲ್ಲದೇ ತಮ್ಮ ಸೆಲ್ಫಿ ತೆಗೆದುಕೊಂಡು ಸುದ್ದಿಯಾಗಿದ್ದಾರೆ.

ರಜೆ ಕಳೆಯಲು ಸುಷ್ಮಿತಾ ಈಚೆಗೆ ದುಬೈಗೆ ಹೋಗಿದ್ದು, ಅಲ್ಲಿ ಚೆನ್ನಾಗಿ ನೃತ್ಯ, ಈಜು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಿಯಾಂಕಾ, ನಂತರ ವರ್ಕೌಟ್ ಭಂಗಿಯಲ್ಲೇ ಸೆಲ್ಫಿ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರು ಮೇಕಪ್‌ ಮಾಡಿಕೊಂಡಿಲ್ಲ ಎನ್ನುವುದು ಈ ಫೋಟೊದ ಹೈಲೈಟ್.

ಸದ್ಯಕ್ಕೆ ಯಾವುದೇ ಸಿನಿಮಾಗಳು ಸುಷ್ಮಿತಾ ಕೈಯಲ್ಲಿ ಇಲ್ಲದಿದ್ದರೂ ತಮ್ಮ ಸಹಜ ಸೌಂದರ್ಯದಿಂದಲೇ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಚಿತ್ರಕ್ಕೆ ತಕ್ಕಂತೆ ಸುಷ್ಮಿತಾ #ಸಿಂಪ್ಲಿಮಿ ಎನ್ನುವ ಹ್ಯಾಷ್ ಟ್ಯಾಗ್ ಹಾಕಿರುವುದು ವಿಶೇಷ.

ಪ್ರತಿಕ್ರಿಯಿಸಿ (+)