ಶುಕ್ರವಾರ, ಡಿಸೆಂಬರ್ 6, 2019
18 °C

ರಜನಿ ಪುತ್ರಿ ಸೌಂದರ್ಯ ವಿಚ್ಛೇದನ

Published:
Updated:
ರಜನಿ ಪುತ್ರಿ  ಸೌಂದರ್ಯ ವಿಚ್ಛೇದನ

ರಜನಿಕಾಂತ್ ಪುತ್ರಿ ಸೌಂದರ್ಯ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. 2016 ಸೆಪ್ಟೆಂಬರ್‌ನಿಂದ ಪ್ರತ್ಯೇಕವಾಗಿ ಬದುಕುತ್ತಿದ್ದ ಸೌಂದರ್ಯ ಹಾಗೂ ಪತಿ ಅಶ್ವಿನ್ ವಿಚ್ಛೇದನ ಪಡೆದುಕೊಂಡಿದ್ದಾರೆ.

ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವಂತೆ ಚೆನ್ನೈ ಕೌಟುಂಬಿಕ ನ್ಯಾಯಾಲಯದ ಮೊರೆಹೋಗಿದ್ದ ಸೌಂದರ್ಯಗೆ ಕೋರ್ಟ್‌ ಇಂದು ವಿಚ್ಛೇದನಕ್ಕೆ ಅನುಮತಿ ನೀಡಿದೆ.

ಸೌಂದರ್ಯ ಹಾಗೂ ಅಶ್ವಿನಿ ಇಬ್ಬರೂ ಸಮ್ಮತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದಂಪತಿಯ ಎರಡು ವರ್ಷದ ಮಗು ವೇದ್ ಯಾರ ಕಸ್ಟಡಿಗೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

‘ಇಬ್ಬರ ಮಧ್ಯೆ ಹೊಂದಾಣಿಕೆಯಾಗದ ಕಾರಣ ಇಬ್ಬರು ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಗೇ 7 ತಿಂಗಳಿನಿಂದ ಇಬ್ಬರೂ ಬೇರೆ ಬದುಕುತ್ತಿದ್ದಾರೆ. ಇನ್ನು ಇವರ ನಡುವೆ ಹೊಂದಾಣಿಕೆ ಸಾಧ್ಯವಿಲ್ಲ’ ಎಂದು ಸೌಂದರ್ಯ ಹಾಗೂ ಅಶ್ವಿನ್ ಇಬ್ಬರ ಪರ ವಕೀಲರು ಹೇಳಿಕೆ ನೀಡಿದ್ದಾರೆ.

ರಜನಿಕಾಂತ್ ಇಬ್ಬರು ಮಕ್ಕಳಲ್ಲಿ ಸೌಂದರ್ಯ ಹಿರಿಯವರು. 2010ರಲ್ಲಿ ಚೆನ್ನೈ ಮೂಲದ ಉದ್ಯಮಿ ಅಶ್ವಿನ್ ಕೈ ಹಿಡಿದಿದ್ದರು. ಎರಡನೇ ಮಗಳು ಐಶ್ವರ್ಯಾ ನಟ ಧನುಷ್ ಅವರನ್ನು ಮದುವೆಯಾಗಿದ್ದಾರೆ.

2016 ಸೆಪ್ಟೆಂಬರ್‌ನಲ್ಲಿ ‘ನಾನು ದಾಂಪತ್ಯ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ’ ಎಂದು ಸೌಂದರ್ಯ ಟ್ವೀಟ್‌ ಮಾಡಿದ್ದರು. ನಂತರ ಡಿಸೆಂಬರ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಗ್ರಾಫಿಕ್ ಡಿಸೈನರ್‌ ಆಗಿರುವ ಸೌಂದರ್ಯ 2014ರಲ್ಲಿ ‘ಕೊಚಾಡಿಯನ್’ ಅನಿಮೇಟೆಡ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಪ್ರತಿಕ್ರಿಯಿಸಿ (+)