ಭಾನುವಾರ, ಡಿಸೆಂಬರ್ 8, 2019
25 °C

‘ಇಂದು ಸರ್ಕಾರ್‌’ ಸಿನಿಮಾ ಮೊದಲು ನಮಗೆ ತೋರಿಸಿ

Published:
Updated:
‘ಇಂದು ಸರ್ಕಾರ್‌’ ಸಿನಿಮಾ ಮೊದಲು ನಮಗೆ ತೋರಿಸಿ

‘ಪೇಜ್ 3’ ಖ್ಯಾತಿಯ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ‘ಇಂದು ಸರ್ಕಾರ್’ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ತೋರಿಸುವ ಮೊದಲು ನಮಗೆ ತೋರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ಅವರಿಗೆ ಪತ್ರ ಬರೆದಿದ್ದಾರೆ.

‘ನಮ್ಮ ನಾಯಕರಾದ ಇಂದಿರಾ ಗಾಂಧಿ ಹಾಗೂ ಸಂಜಯ್ ಗಾಂಧಿಯ ಬಗ್ಗೆ ಚಿತ್ರದಲ್ಲಿ ತಪ್ಪಾಗಿ ಬಿಂಬಿಸಿರುವ ಸಾಧ್ಯತೆಗಳಿವೆ. ಆದ್ದರಿಂದ ನಮಗೆ ಮೊದಲು ಸಿನಿಮಾ ತೋರಿಸಬೇಕು’ ಎಂದು ಪಕ್ಷದ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಸಂಜಯ್ ನಿರುಪಮ್ ಪತ್ರದಲ್ಲಿ ಹೇಳಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಯಿಸಿರುವ ಚಿತ್ರದ ನಿರ್ದೇಶಕ, ‘ನಾನು ಈ ಸಿನಿಮಾವನ್ನು ಯಾರಿಗೂ ತೋರಿಸುವುದಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರಲಾಗುತ್ತಿದೆ ಆದರೆ, ನಾನು ಯಾವುದಕ್ಕೂ ಹೆದರುವುದಿಲ್ಲ. ಸಿನಿಮಾದಲ್ಲಿ ಶೇಕಡ 70 ಭಾಗ ಕಾಲ್ಪನಿಕ ಹಾಗೂ 30 ಭಾಗ ಮಾತ್ರ ಸತ್ಯ ಘಟನೆಗಳನ್ನು ಆಧರಿಸಿ ಚಿತ್ರಕಥೆ ಮಾಡಲಾಗಿದೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)