ಶುಕ್ರವಾರ, ಡಿಸೆಂಬರ್ 6, 2019
17 °C

ಶಿವರಾಜ ಸಜ್ಜನರಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವರಾಜ ಸಜ್ಜನರಗೆ ಜಾಮೀನು

ಹಾವೇರಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ ಅವರಿಗೆ ಬುಧವಾರ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.

2013ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚುನಾವಣಾ ಆಯೋಗವು ಶಿವರಾಜ ಸಜ್ಜನರ ವಿರುದ್ಧ ದೂರು ದಾಖಲಿಸಿತ್ತು.

ಆದರೆ, ಈ ಪ್ರಕರಣದ ವಿಚಾರಣೆಗಳಿಗೆ ಅವರು ಗೈರಾಗಿದ್ದರು. ಈ ಕಾರಣಕ್ಕೆ ಜಿಲ್ಲಾ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ವಾರಂಟ್ ನಿರ್ಲಕ್ಷಿಸಿದ್ದರಿಂದ ಅವರನ್ನು ಸೋಮವಾರ ಬಂಧಿಸಿ, ಇದೇ 10ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶ ಎನ್‌. ಸುನೀಲ್ ಕುಮಾರ್‌ ಸಿಂಗ್ ಆದೇಶಿಸಿದ್ದರು.

ಪ್ರತಿಕ್ರಿಯಿಸಿ (+)