ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುನ್ಹಿರಾಮನ್‌ಗೆ ಪ್ರಶಸ್ತಿ ಪ್ರದಾನ

Last Updated 5 ಜುಲೈ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ವತಿಯಿಂದ ಖ್ಯಾತ ಶಿಲ್ಪಕಲಾವಿದ ಕನೈ ಕುನ್ಹಿರಾಮನ್ ಅವರನ್ನು ‘ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದ್ದು, ಬುಧವಾರ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಅನಾರೋಗ್ಯದ ಕಾರಣದಿಂದ ಕನೈ ಕುನ್ಹಿರಾಮನ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹೀಗಾಗಿ, ಪ್ರಶಸ್ತಿಯನ್ನು ಮಾತ್ರ ಪ್ರದರ್ಶನ ಮಾಡಲಾಯಿತು.  ಪ್ರಶಸ್ತಿ ಪ್ರಮಾಣ ಪತ್ರ, ಫಲಕ ಹಾಗೂ ₹1ಲಕ್ಷ ಬಹುಮಾನ ಒಳಗೊಂಡಿದೆ.

‘ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣಕ್ಕೆ ಕುನ್ಹಿರಾಮನ್ ಅವರು ಪ್ರಶಸ್ತಿ ಸ್ವೀಕರಿಸಲು ಬಂದಿಲ್ಲ. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದಾರೆ. ಅವರು ಪರಿಷತ್ತಿಗೆ ಬಂದಾಗ ಇಲ್ಲಿನ ಕಲಾ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತೇವೆ’ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

ಕಲಾಕೃತಿ ಪ್ರದರ್ಶನ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಎಂ.ಎಸ್.ನಂಜುಂಡರಾವ್ ಅವರ 85ನೇ ಜನ್ಮದಿನಾಚರಣೆ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ಅಂತರರಾಷ್ಟ್ರೀಯ ಕಲಾವಿದ ಕೃಷ್ಣರೆಡ್ಡಿ ಅವರ ಗ್ರಾಫಿಕ್ ಕಲಾಕೃತಿಗಳ  ಪ್ರದರ್ಶನ ಆಯೋಜಿಸಲಾಗಿತ್ತು.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್‌ ಕುಮಾರ್, ‘ಕೃಷ್ಣರೆಡ್ಡಿ ಅವರ ಕಲಾಕೃತಿಗಳಿಂದ ವಿಜ್ಞಾನ ಹಾಗೂ ಕಲೆ ನಡುವೆ ಬಾರಿ ವ್ಯತ್ಯಾಸ ಇಲ್ಲದಿರುವುದು ಅರಿವಿಗೆ ಬರುತ್ತದೆ. ಕಲೆ ಹಾಗೂ ವಿಜ್ಞಾನ ಪರಸ್ಪರ ಬೆಸೆದುಕೊಂಡಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT