ಶನಿವಾರ, ಡಿಸೆಂಬರ್ 7, 2019
24 °C

ಏಷ್ಯನ್ ಸ್ನೂಕರ್: ಭಾರತ ‘ಎ’ ತಂಡಕ್ಕೆ ಪ್ರಶಸ್ತಿ

Published:
Updated:
ಏಷ್ಯನ್ ಸ್ನೂಕರ್:  ಭಾರತ ‘ಎ’ ತಂಡಕ್ಕೆ ಪ್ರಶಸ್ತಿ

ಬಿಷೆಕೆಕ್‌, ಕಜಕಸ್ತಾನ :  ಪಂಕಜ್‌ ಅಡ್ವಾಣಿ ನಾಯಕತ್ವದ ಭಾರತ ‘ಎ’ ತಂಡ ಏಷ್ಯನ್ ಸ್ನೂಕರ್ ತಂಡ ಚಾಂಪಿ ಯನ್‌ಷಿಪ್‌ನಲ್ಲಿ ಬುಧವಾರ ಪ್ರಶಸ್ತಿ ಎತ್ತಿಹಿಡಿದಿದೆ.

ಫೈನಲ್ ಪಂದ್ಯದಲ್ಲಿ ಭಾರತ ತಂಡ 3–0ರಲ್ಲಿ ಪಾಕಿಸ್ತಾನವನ್ನು ಮಣಿಸಿದೆ. ಮೊಹಮ್ಮದ್ ಬಿಲಾಲ್ ವಿರುದ್ಧದ ಮೊದಲ ಪಂದ್ಯವನ್ನು ಪಂಕಜ್ ಗೆದ್ದು ಕೊಂಡರು.

ಭರವಸೆಯ ಆಟಗಾರ ಲಕ್ಷ್ಮಣ್‌ ರಾವುತ್‌ ಪಾಕಿಸ್ತಾನದ ಬಾಬರ್‌ ಮಸಿಹ್‌ ಅವರನ್ನು ಮಣಿಸುವ ಮೂಲಕ 2–0ಯ ಮುನ್ನಡೆಗೆ ಕಾರಣರಾದರು.

ಎದುರಾಳಿ ಆಟಗಾರ ಖಾತೆ ತೆರೆಯದೇ ಸೋಲು ಒಪ್ಪಿಕೊಂಡರು.  ಸಿಂಗಲ್ಸ್ ವಿಭಾಗದ ಹಿನ್ನಡೆಯ ಬಳಿಕ ಡಬಲ್ಸ್ ವಿಭಾಗದಲ್ಲಿ ಆಡಿದ ಪಾಕಿ

ಸ್ತಾನದ ಆಟಗಾರರು ಒತ್ತಡಕ್ಕೆ ಒಳಗಾದರು.

ಪಂಕಜ್‌ ಹಾಗೂ ಲಕ್ಷ್ಮಣ್ ಅವರನ್ನು ಒಳಗೊಂಡ ಡಬಲ್ಸ್ ತಂಡ ಮೂರನೇ ಪಂದ್ಯ ಗೆಲ್ಲುವ ಮೂಲಕ ಪಾಕಿಸ್ತಾನವನ್ನು ಸುಲಭದಲ್ಲಿ ಕಟ್ಟಿ ಹಾಕಿತು.

ಪ್ರತಿಕ್ರಿಯಿಸಿ (+)