ಬುಧವಾರ, ಡಿಸೆಂಬರ್ 11, 2019
20 °C

ಬಸ್‌ನಲ್ಲಿ ಬಲಾತ್ಕಾರವಾಗಿ ಮಹಿಳೆ ಚುಂಬಿಸಿದ ಬಿಜೆಪಿ ನಾಯಕ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ನಲ್ಲಿ ಬಲಾತ್ಕಾರವಾಗಿ ಮಹಿಳೆ ಚುಂಬಿಸಿದ ಬಿಜೆಪಿ ನಾಯಕ ಸೆರೆ

ಮುಂಬೈ: ಜೂನ್‌ 27 ರಂದು  ಸುವಿಹಾರಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ  ರವೀಂದ್ರ ಬವಂಥಾಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಗಡ್‌ಚಿರೋಳಿಯಿಂದ ನಾಗಪುರ ನಡುವೆ ಸಂಚರಿಸುವ ಬಸ್‌ನಲ್ಲಿ ಈ ಘಟನೆ ನಡೆದಿದೆ. ಚುಂಬನದ ದೃಶ್ಯವನ್ನು ವಾಹನದ ಚಾಲಕ ಮತ್ತು ಕ್ಲೀನರ್‌ ತಮ್ಮ ಮೊಬೈಲ್‌ ಪೋನಿನಲ್ಲಿ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮಹಿಳೆಯು ರವೀಂದ್ರ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.  ಪೊಲೀಸರು ಅತ್ಯಾಚಾರ ಸೇರಿದಂತೆ ಇತರ ಆರೋಪಗಳ ಅಡಿ ದೂರು ದಾಖಲಿಸಿಕೊಂಡು ರವೀಂದ್ರ ಅವರನ್ನು ಬಂಧಿಸಿದ್ದಾರೆ. ವಿಡಿಯೊ ಚಿತ್ರೀಕರಣ ಮಾಡಿಕೊಂಡಿರುವ ಚಾಲಕ ಹಾಗೂ ಕ್ಲೀನರ್‌  ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)