ಶನಿವಾರ, ಡಿಸೆಂಬರ್ 7, 2019
25 °C

ಬಾಹುಬಲಿ ಜೋಡಿ ಪ್ರಭಾಸ್‌–ಅನುಷ್ಕಾ ‘ಸಾಹೋ’ ಚಿತ್ರದಲ್ಲಿ ಮತ್ತೊಮ್ಮೆ ಕಮಾಲ್‌

Published:
Updated:
ಬಾಹುಬಲಿ ಜೋಡಿ ಪ್ರಭಾಸ್‌–ಅನುಷ್ಕಾ ‘ಸಾಹೋ’ ಚಿತ್ರದಲ್ಲಿ ಮತ್ತೊಮ್ಮೆ ಕಮಾಲ್‌

ಹೈದರಾಬಾದ್‌: ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ನಟಿಸಿದ ಪ್ರಭಾಸ್‌– ಅನುಷ್ಕಾ ಜೋಡಿ ಇದೀಗ ‘ಸಾಹೋ’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಪ್ರಭಾಸ್‌ಗೆ ನಾಯಕಿಯಾಗಿ ಅನುಷ್ಕಾ ಬಿಲ್ಲಾ, ಮಿರ್ಚಿ, ಬಾಹುಬಲಿ, ಬಾಹುಬಲಿ–2 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಸಾಹೋ ಚಿತ್ರದಲ್ಲಿ ನಟಿಸಿಕೊಳ್ಳುವ ಮೂಲಕ ಸತತ ಐದನೇ ಬಾರಿಗೆ ಒಟ್ಟಿಗೆ ನಟಿಸಲಿದ್ದಾರೆ.

ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಾಹೋ ಚಿತ್ರಕ್ಕೆ  ₹150 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, 2018ಕ್ಕೆ ನಾಲ್ಕು ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರ ಸಾಹಸ ಹಾಗೂ ರೋಮಾಂಚನಕಾರಿ ಸನ್ನಿವೇಶಗಳನ್ನು ಒಳಗೊಂಡಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರತಿಕ್ರಿಯಿಸಿ (+)